Advertisement

ಏಶ್ಯನ್‌ ಪೇಟೆಯಲ್ಲಿ ದೌರ್ಬಲ್ಯ : ಮುಂಬಯಿ ಶೇರು 200 ಅಂಕ ನಷ್ಟ

05:32 AM Jan 14, 2019 | |

ಮುಂಬಯಿ : ಏಶ್ಯನ್‌ ಶೇರು ಪೇಟೆಗಳಲ್ಲಿ ದೌರ್ಬಲ್ಯ ತೋರಿ ಬಂದಿರುವುದು ಮತ್ತು ವಿದೇಶೀ ಹೂಡಿಕೆದಾರ ಸಂಸ್ಥೆಗಳು ವ್ಯಾಪಕ ಶೇರು ಖರೀದಿಯಲ್ಲಿ ತೊಡಗಿಕೊಂಡಿರುವುದನ್ನು ಅನುಸರಿಸಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಸೋಮವಾರ ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ 150ಕ್ಕೂ ಅಧಿಕ ಅಂಕಗಳ ನಷ್ಟಕ್ಕೆ ಗುರಿಯಾಯಿತು.

Advertisement

ಬೆಳಗ್ಗೆ 11 ಗಂಟೆಯ ಹೊತ್ತಿಗೆ ಸೆನ್ಸೆಕ್ಸ್‌ 200.80 ಅಂಕಗಳ ನಷ್ಟದೊಂದಿಗೆ 35,809.04 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 61.80 ಅಂಕಗಳ ನಷ್ಟದೊಂದಿಗೆ 10,733.20 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.

ಇಂದಿನ ಆರಂಭಿಕ ವಹಿವಾಟಿನಲ್ಲಿ ಡಾಲರ್‌ ಎದುರು ರೂಪಾಯಿ 10 ಪೈಸೆಯ ಹಿನ್ನಡೆಯನ್ನು ಕಂಡು 70.59 ರೂ. ಮಟದಲ್ಲಿ ವ್ಯವಹಾರ ನಿರತವಾಗಿತ್ತು.

ಟಾಪ್‌ ಗೇನರ್‌ಗಳು : ಎಸ್‌ ಬ್ಯಾಂಕ್‌, ಇನ್‌ಫೋಸಿಸ್‌, ಭಾರ್ತಿ ಇನ್‌ಫ್ರಾಟೆಲ್‌, ಸನ್‌ ಫಾರ್ಮಾ,  ಎಚ್‌ಪಿಸಿಎಲ್‌; ಟಾಪ್‌ ಲೂಸರ್‌ಗಳು : ಗೇಲ್‌, ಲಾರ್ಸನ್‌, ಇಂಡಸ್‌ ಇಂಡ್‌ ಬ್ಯಾಂಕ್‌, ಎಚ್‌ ಡಿ ಎಫ್ ಸಿ, ವೇದಾಂತ.

Advertisement

Udayavani is now on Telegram. Click here to join our channel and stay updated with the latest news.

Next