ಮುಂಬಯಿ : 2019 ಹೊಸ ವರ್ಷದ ಮೊದಲ ದಿನವಾದ ಇಂದು ಮಂಗಳವಾರ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ದಿನದ ವಹಿವಾಟನ್ನು ನಷ್ಟದೊಂದಿಗೆ ಆರಂಭಿಸಿತು. ವಿದೇಶಿ ಬಂಡವಾಳದ ಹೊರ ಹರಿವು, ಏಶ್ಯನ್ ಶೇರು ಪೇಟೆಗಳಲ್ಲಿ ತೋರಿ ಬಂದಿರುವ ದುರ್ಬಲ ಪ್ರವೃತ್ತಿ ಇವೇ ಮೊದಲಾದ ಕಾರಣಗಳಿಗೆ ಮುಂಬಯಿ ಶೇರು ಪೇಟೆ ನಿಸ್ತೇಜಗೊಂಡಿತು.
ಬೆಳಗ್ಗೆ 10.40ರ ಹೊತ್ತಿಗೆ ಸೆನ್ಸೆಕ್ಸ್ 102.77 ಅಂಕಗಳ ನಷ್ಟದೊಂದಿಗೆ 35,965.56 ಅಂಕಗಳ ಮಟ್ಟದಲ್ಲೂ, ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 35.50 ಅಂಕಗಳ ನಷ್ಟದೊಂದಿಗೆ 10,827.00 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಡಾಲರ್ ಎದುರು ರೂಪಾಯಿ ಇಂದು 15 ಪೈಸೆಗಳ ಏರಿಕೆಯನ್ನು ಕಂಡು 69.62 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಇಂದಿನ ಬೆಳಗ್ಗಿನ ವಹಿವಾಟಿನಲ್ಲಿ ಎಕ್ಸಿಸ್ ಬ್ಯಾಂಕ್, ಇಂಡಸ್ ಇಂಡ್ ಬ್ಯಾಂಕ್, ಎಸ್ ಬ್ಯಾಂಕ್, ಮಾರುತಿ ಸುಜುಕಿ, ಸನ್ ಫಾರ್ಮ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳು : ಎಸ್ ಬ್ಯಾಂಕ್, ಸನ್ ಫಾರ್ಮಾ, ಎಕ್ಸಿಸ್ ಬ್ಯಾಂಕ್, ಭಾರ್ತಿ ಏರ್‌ಟೆಲ್,ಡಾ.ರೆಡ್ಡೀಸ್ ಲ್ಯಾಬ್; ಟಾಪ್ ಲೂಸರ್‌ಗಳು : ಹಿಂಡಾಲ್ಕೊ, ಇಂಡಸ್ ಇಂಡ್ ಬ್ಯಾಂಕ್, ಇಂಡಿಯಾಬುಲ್ಸ್ ಹೌಸಿಂಗ್, ಜೆಎಸ್‌ಡಬ್ಲ್ಯು ಸ್ಟೀಲ್, ಮಹೀಂದ್ರ.