ಮುಂಬಯಿ : ಚಿಲ್ಲರೆ ಹಣದುಬ್ಬರವು ಕಳೆದ 7 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದ ಕಾರಣ ಆರ್‌ಬಿಐ ಬಡ್ಡಿದರ ಇಳಿಸುವ ಸಾಧ್ಯತೆ ಕರಗಿ ಹೋಗಿರುವುದು ಮುಂಬಯಿ ಶೇರು ಪೇಟೆಗೆ ನಿರಾಶೆ ಉಂಟುಮಾಡಿದೆ. ಹಾಗಾಗಿ ಇಂದು ಮಂಗಳವಾರದ ವಹಿವಾಟನ್ನು ಸೆನ್ಸೆಕ್ಸ್ 92 ಅಂಕಗಳ ಕುಸಿತದೊಂದಿಗೆ 32,941.87 ಅಂಕಗಳ ಮಟದಲ್ಲಿ ನಿರಾಶಾದಾಯಕವಾಗಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಪೇಟೆ ನಿಫ್ಟಿ ಸೂಚ್ಯಂಕ 38.35 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 10,186.60 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇಂದಿನ ವಹಿವಾಟಿನಲ್ಲಿ ಲಾರ್ಸನ್, ಇನ್‌ಫೋಸಿಸ್, ಎಚ್‌ಡಿಎಫ್ಸಿ ಗ್ರೂಪ್ ಶೇರುಗಳು ಮುಂಬಯಿ ಶೇರು ಪೇಟೆಯನ್ನು ಕೆಳಕ್ಕೆ ಜಗ್ಗಿದವು. ರಿಲಯನ್ಸ್ ಇಂಡಸ್ಟ್ರೀಸ್ ಶೇರು ಸ್ವಲ್ಪ ಮಟ್ಟಿಗೆ ಸೆನ್ಸೆಕ್ಸ್ ಕುಸಿತವನ್ನು ತಡೆಯಿತು.
ಇಂದಿನ ಟಾಪ್ ಗೇನರ್‌ಗಳು : ಹೀರೋ ಮೋಟೋಕಾರ್ಪ್, ಎಕ್ಸಿಸ್ ಬ್ಯಾಂಕ್, ಬಜಾಜ್ ಫಿನಾನ್ಸ್, ಬಜಾಜ್ ಆಟೋ, ರಿಲಯನ್ಸ್.
ಟಾಪ್ ಲೂಸರ್‌ಗಳು : ಭಾರ್ತಿ ಇನ್‌ಫ್ರಾಟೆಲ್, ಲೂರ್ಸನ್, ಎಚ್‌ಪಿಸಿಎಲ್, ಪವರ್ ಗ್ರಿಡ್, ವೇದಾಂತ.