ಮುಂಬಯಿ : ಈ ಬಾರಿಯ ಮುಂಗಾರು ಮಾರುತಗಳು ಉತ್ತಮವಿದ್ದು ದೇಶವ್ಯಾಪಿ ಮಳೆ ಸುರಿಸುವುವು ಎಂಬ ಹವಾಮಾನ ಇಲಾಖಾ ವರದಿಯಿಂದ ಸ್ಫೂರ್ತಿ ಪಡೆದು ಇಂದಿನ ಆರಂಭಿಕ ವಹಿವಾಟಿನಲ್ಲಿ 50 ಅಂಕಗಳ ಜಿಗಿತವನ್ನು ಕಂಡಿದ್ದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ, ಮಧ್ಯಾಹ್ನ 12 ಗಂಟೆಯ ಹೊತ್ತಿಗೆ ತನ್ನ ಆರಂಭಿಕ ಗಳಿಕೆಯನ್ನು ಬಿಟ್ಟುಕೊಟ್ಟು 31.72 ಅಂಕಗಳ ನಷ್ಟದೊಂದಿಗೆ 29,287.38 ಅಂಕಗಳ ಮಟ್ಟಕ್ಕೆ ಕುಸಿಯಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 11.75 ಅಂಕಗಳ ನಷ್ಟದೊಂದಿಗೆ 9,903.40 ಅಂಕಗಳ ಮಟ್ಟದಲ್ಲಿ ವ್ಯವಹಾರ ನಿರತಾಗಿತ್ತು.
ಇಂದಿನ ವಹಿವಾಟಿನಲ್ಲಿ ಅತೀ ಹೆಚ್ಚು ಕ್ರಿಯಾಶೀಲವಾಗಿದ್ದ ಶೇರುಗಳೆಂದರೆ ಟಿಸಿಎಸ್, ಎಸ್ ಬ್ಯಾಂಕ್, ಟಾಟಾ ಸ್ಟೀಲ್, ಪವರ್ ಗ್ರಿಡ್ ಕಾರ್ಪೊರೇಶನ್ ಮತ್ತು ರಿಲಯನ್ಸ್.
ಇಂದಿನ ಬೆಳಗ್ಗಿನ ವಹಿವಾಟಿನ ಟಾಪ್ ಗೇನರ್‌ಗಳು ಪವರ್ ಗ್ರಿಡ್, ಭಾರ್ತಿ ಇನ್‌ಫ್ರಾಟೆಲ್, ಟಾಟಾ ಪವರ್, ಎನ್‌ಟಿಪಿಸಿ ಮತ್ತು ಅದಾನಿ ಪೋರ್ಟ್.
ಟಾಪ್ ಲೂಸರ್‌ಗಳು : ಎಕ್ಸಿಸ್ ಬ್ಯಾಂಕ್, ಗೇಲ್, ಹೀರೋ ಮೋಟೋಕಾರ್ಪ್, ಟಿಸಿಎಸ್ ಮತ್ತು ಬಾಶ್.