ಮುಂಬಯಿ : ಜಾಗತಿಕ ಶೇರು ಪೇಟೆಗಳಲ್ಲಿನ ಸ್ಥಿರತೆಯನ್ನು ಅನುಸರಿಸಿ ಮುಂಬಯಿ ಶೇರುಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ, ನಿರಂತರ ಮೂರನೇ ದಿನವಾಗಿ, 132 ಅಂಕಗಳ ಉತ್ತಮ ಮುನ್ನಡೆಯನ್ನು ದಾಖಲಿಸಿತು.
ನಾಳೆ ಬಿಡುಗಡೆಯಾಗಲಿರುವ 3ನೇ ತ್ತೈಮಾಸಿಕ ಜಿಡಿಪಿ ಅಂಕಿಅಂಶಗಳನ್ನು ಇದೀಗ ಹೂಡಿಕೆದಾರರು ಕುತೂಹಲದಿಂದ ನಿರೀಕ್ಷಿಸುತ್ತಿದ್ದಾರೆ. ಭಾರತದ ಆರ್ಥಿಕತೆಯು ಈಗ ಖಚಿತ ಪುನಶ್ಚೇತನದ ಹಾದಿಯಲ್ಲಿ ಸಾಗುತ್ತಿರುವುದಾಗಿ ಮಾರ್ಗನ್ ಸ್ಟಾನ್‌ಲೀ ಹೇಳಿರುವುದು ಮುಂಬಯಿ ಶೇರು ಮಾರುಕಟ್ಟೆಗೆ ಹುರುಪು ನೀಡಿದೆ.
ಕಳೆದೆರಡು ದಿನಗಳ ವಹಿವಾಟಿನಲ್ಲಿ ಸೆನ್ಸೆಕ್ಸ್ 626.25 ಅಂಕಗಳ ಮುನ್ನಡೆಯನ್ನು ಸಾಧಿಸಿತ್ತು.
ಇಂದು ಬೆಳಗ್ಗೆ 10.30ರ ಹೊತ್ತಿಗೆ ಸೆನ್ಸೆಕ್ಸ್ 81.71 ಅಂಕಗಳ ನಷ್ಟಕ್ಕೆ ಗುರಿಯಾಗಿ 34,364.04 ಅಂಕಗಳ ಮಟ್ಟಕ್ಕೆ ಜಾರಿತ್ತು. ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 31.10 ಅಂಕಗಳ ನಷ್ಟಕ್ಕೆ ಗುರಿಯಾಗಿ 10,551.50 ಅಂಕಗಳ ಮಟ್ಟಕ್ಕೆ ಇಳಿದಿತ್ತು.
ರಿಲಯನ್ಸ್, ಮಾರುತಿ ಸುಜುಕಿ, ಎಸ್ ಬ್ಯಾಂಕ್, ಎಸ್‌ಬಿಐ ಮತ್ತು ಟಾಟಾ ಸ್ಟೀಲ್ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.