ಮುಂಬಯಿ : ಬೆಳಗ್ಗಿನ ಆರಂಭಿಕ ವಹಿವಾಟಿನ ಗಳಿಕೆಯನ್ನೆಲ್ಲ ಬಿಟ್ಟುಕೊಟ್ಟ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಇಂದು ಬುಧವಾರದ ವಹಿವಾಟನ್ನು 90.42 ಅಂಕಗಳ ನಷ್ಟದೊಂದಿಗೆ 31,833.99 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿರುವುದು ನಿರಾಶೆಗೆ ಕಾರಣವಾಗಿದೆ.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 32.15 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 9,984.80 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. ಇಂದಿನ ವಹಿವಾಟಿನಲ್ಲಿ ಪ್ರತಿ ಒಂದು ಶೇರಿಗೆ ಎರಡು ಶೇರುಗಳು ಹಿನ್ನಡೆಗೆ ಗುರಿಯಾದವು.
ಕಳೆದ ಮೂರು ದಿನಗಳ ವಹಿವಾಟಿನಲ್ಲಿ ಸೆನ್ಸೆಕ್ಸ್ 332.38 ಅಂಕಗಳಳನ್ನು ಗಳಿಸಿತ್ತು.
ಭಾರ್ತಿ ಏರ್‌ಟೆಲ್, ಎಚ್‌ಪಿಸಿಎಲ್, ಭಾರ್ತಿ ಇನ್‌ಫ್ರಾಟೆಲ್, ಟಿಸಿಎಸ್, ಬಿಪಿಸಿಎಲ್ ಶೇರುಗಳು ಟಾಪ್ ಗೇನರ್ ಎನಿಸಿಕೊಂಡವು.
ಎಸ್ ಬ್ಯಾಂಕ್, ವೇದಾಂತ, ಎಸ್‌ಬಿಐ, ಟಾಟಾ ಮೋಟರ್, ಡಾ.ರೆಡ್ಡಿ ಶೇರುಗಳು ಹಿನ್ನಡೆಗೆ ಗುರಿಯಾಗಿ ಟಾಪ್ ಲೂಸರ್ ಎನಿಸಿಕೊಂಡವು.