Advertisement

ಮುಂಬಯಿ ಶೇರು ಪೇಟೆಯಲ್ಲಿ ಮತ್ತೆ ಗೂಳಿಯಾಟ: 235 ಅಂಕ ಜಿಗಿತ

04:20 PM Aug 14, 2017 | |

ಮುಂಬಯಿ : ಕಳೆದ ವಾರದ ಐದೂ ದಿನಗಳ ವಹಿವಾಟಿನಲ್ಲಿ 1,111 ಅಂಕಗಳ ಬೃಹತ್‌ ನಷ್ಟಕ್ಕೆ ಗುರಿಯಾಗಿದ್ದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಇಂದು ಸೋಮವಾರದ ವಹಿವಾಟನ್ನು 235.44 ಅಂಕಗಳ ಉತ್ತಮ ಜಿಗಿತದೊಂದಿಗೆ 31,449.03 ಅಂಕಗಳ ಮಟ್ಟದಲ್ಲಿ ಆಶಾದಾಯಕವಾಗಿ ಕೊನೆಗೊಳಿಸಿತು.

Advertisement

ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 83.35 ಅಂಕಗಳ ಜಿಗಿತವನ್ನು ದಾಖಲಿಸಿ 9,794.15 ಅಂಕಗಳ ಮಟ್ಟವನ್ನು ತಲುಪಿತಾದರೂ ತನ್ನ ಐತಿಹಾಸಿಕ ಸಾಧನೆಯ 10,000 ಅಂಕಗಳ ಮಟ್ಟವನ್ನು ಪುನರ್‌ ಸಂಪಾದಿಸುವಲ್ಲಿ ವಿಫ‌ಲವಾಯಿತು.

ಇಂದಿನ ವಹಿವಾಟಿನಲ್ಲಿ ಮಾರುಕಟ್ಟೆಯ ವಹಿವಾಟು ಹರಹು ಧನಾತ್ಮಕವಾಗಿತ್ತು. 1,880 ಶೇರಗಳು ಇಂದು ಮುನ್ನಡೆ ಸಾಧಿಸಿದರೆ 720 ಶೇರುಗಳು ಹಿನ್ನಡೆಗೆ ಗುರಿಯಾದವು; 120 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.

ಸಿಪ್ಲಾ ಮತ್ತು ಸನ್‌ ಫಾರ್ಮಾ ಶೇರುಗಳು ಟಾಪ್‌ ಗೇನರ್‌ ಪಟ್ಟಿಯಲ್ಲಿ ವಿಜೃಂಭಿಸಿದವು; ಆದರೆ ಎಸ್‌ಬಿಐ, ಕೋಟಕ್‌ ಮಹೀಂದ್ರ, ಭಾರ್ತಿ ಏರ್‌ಟೆಲ್‌ ಮತ್ತು ಬಾಶ್‌ ನಷ್ಟಕ್ಕೆ ಗುರಿಯಾದವು. 

Advertisement

Udayavani is now on Telegram. Click here to join our channel and stay updated with the latest news.

Next