Advertisement

ಏಶ್ಯನ್‌ ಪ್ರಭಾವ: ಮುಂಬಯಿ ಶೇರು 184 ಅಂಕ ಜಂಪ್‌

04:06 PM Jan 05, 2018 | |

ಮುಂಬಯಿ : ಏಶ್ಯನ್‌ ಶೇರು ಮಾರುಕಟ್ಟೆಗಳಲ್ಲಿನ ತೇಜಿ, ಡಾಲರ್‌ ಎದುರು ಚೇತರಿಕೆ ಕಂಡ ರೂಪಾಯಿ ಮತ್ತು ಸದ್ಯದಲ್ಲೇ ಅನಾವರಣಗೊಳ್ಳಲಿರುವ ಕಂಪೆನಿಗಳ 3ನೇ ತ್ತೈಮಾಸಿಕ ಫ‌ಲಿತಾಂಶಗಳ ಬಗೆಗಿನ ವಿಶ್ವಾಸ – ಇವೇ ಮೊದಲಾದ ಕಾರಣಗಳಿಂದಾಗಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು 184.21 ಅಂಕಗಳ ಉತ್ತಮ ಏರಿಕೆಯನ್ನು ಕಂಡು 34,153.85 ಅಂಕಗಳ ಮಟ್ಟವನ್ನು ತಲುಪಿತು.

Advertisement

ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 54.10 ಅಂಕಗಳ ಏರಿಕೆಯೊಂದಿಗೆ 10,558.90 ಅಂಕಗಳ ಮಟ್ಟವನ್ನು ತಲುಪಿತು.

ಇಂದು ವಹಿವಾಟಿಗೆ ಒಳಪಟ್ಟ 30,063 ಶೇರುಗಳ ಪೈಕಿ 1,709 ಶೇರುಗಳು ಮುನ್ನಡೆ ಸಾಧಿಸಿದವು; 1,226 ಶೇರುಗಳು ಹಿನ್ನಡೆಗೆ ಗುರಿಯಾದವು; 128 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ. ಮಿಡ್‌ ಕ್ಯಾಪ್‌ ಶೇರುಗಳು ಇಂದು ಹೊಸ ದಾಖಲೆಯ ಎತ್ತರವನ್ನು ತಲುಪಿದವು.

ಇಂದಿನ ಟಾಪ್‌ ಗೇನರ್‌ಗಳು : ಐಡಿಯಾ ಸೆಲ್ಯುಲರ್‌, ಎಸ್‌ ಬ್ಯಾಂಕ್‌, ಬಜಾಜ್‌ ಫಿನಾನ್ಸ್‌, ಅದಾನಿ ಪೋರ್ಟ್‌, ಭಾರ್ತಿ ಏರ್‌ಟೆಲ್‌; ಟಾಪ್‌ ಲೂಸರ್‌ಗಳು : ಭಾರ್ತಿ ಇನ್‌ಫ್ರಾಟೆಲ್‌, ಹಿಂಡಾಲ್ಕೊ, ಯುಪಿಎಲ್‌, ಎಚ್‌ಪಿಸಿಎಲ್‌, ಬಿಪಿಸಿಎಲ್‌.

Advertisement

Udayavani is now on Telegram. Click here to join our channel and stay updated with the latest news.

Next