ಮುಂಬಯಿ : ಮುಂಬಯಿ ಶೇರು ಪೇಟೆಗೆ ಇಂದು ಗುರುವಾರ ಗೂಳಿಯ ಪ್ರವೇಶವಾಗಿದೆಯೋ ಎಂಬ ರೀತಿಯಲ್ಲಿ ಸೆನ್ಸೆಕ್ಸ್ ಸೂಚ್ಯಂಕ 348.23 ಅಂಕಗಳ ಭರ್ಜರಿ ಏರಿಕೆಯನ್ನು ದಾಖಲಿಸಿ 32,182.22 ಅಂಕಗಳ ಮಟ್ಟದಲ್ಲಿ ದಿನದ ವಹಿವಾಟನ್ನು ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 113.70 ಅಂಕಗಳ ಉತ್ತಮ ನೆಗೆತವನ್ನು ದಾಖಲಿಸಿ 10,098.50 ಅಂಕಗಳ ಮಟ್ಟದಲ್ಲಿ ದಿನದ ವಹಿವಾಟನ್ನು ಮುಗಿಸಿತು.
ಡಾಲರ್ ಎದುರು ರೂಪಾಯಿ ವಿನಿಮಯ ದರ ನಾಲ್ಕು ಪೈಸೆಯಷ್ಟು ಸುಧಾರಿಸಿರುವುದು, ದೀಪಾವಳಿ ಹಬ್ಬ ಸನ್ನಿಹಿತವಾಗಿರುವುದು ಮತ್ತು ವಹಿವಾಟುದಾರರಿಂದ ವ್ಯಾಪಕ ಶಾರ್ಟ್ ಕವರಿಂಗ್ ನಡೆದಿರುವುದು ಮುಂಬಯಿ ಶೇರು ಪೇಟೆಯಲ್ಲಿನ ಇಂದಿನ ತೇಜಿಗೆ ಕಾರಣವಾಗಿದೆ.
ಇಂದು ವಹಿವಾಟಿಗೆ ಒಳಪಟ್ಟ ಶೇರುಗಳ ಪೈಕಿ 1,697 ಶೇರುಗಳು ಮುನ್ನಡೆ ಸಾಧಿಸಿದರೆ 973 ಶೇರುಗಳು ಹಿನ್ನಡೆಗೆ ಗುರಿಯಾದವು; 121 ಶೇರುಗಳ ಧಾರಣೆಯಲ್ಲಿ ಯಾವುದೇ ಬದಲಾವಣೆ ಕಂಡು ಬರಲಿಲ್ಲ.
ರಿಲಯನ್ಸ್ , ಸನ್ ಫಾರ್ಮಾ, ಹಿಂಡಾಲ್ಕೊ, ಭಾತಿರ ಇನ್‌ಫ್ರಾಟೆಲ್ ಟಾಪ್ ಗೇನರ್ ಎನಿಸಿಕೊಂಡವು; ಇದೇ ವೇಳೆ ಭಾರ್ತಿ ಏರ್‌ಟೆಲ್, ಇನ್‌ಫೋಸಿಸ್, ಅಲ್‌ಟ್ರಾ ಟೆಕ್ ಸಿಮೆಂಟ್ ಟಾಪ್ ಲೂಸರ್ ಎನಿಸಿಕೊಂಡವು.