ಮುಂಬಯಿ : ಆರ್‌ಬಿಐ ತನ್ನ ಹಣಕಾಸು ನೀತಿಯನ್ನು ಪ್ರಕಟಿಸುವ ಮುನ್ನ ಹೂಡಿಕೆದಾರರು ಮತ್ತು ವಹಿವಾಟುದಾರರು ಎಚ್ಚರಿಕೆಯ ನಡೆ ತೋರಿದ ಕಾರಣ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಮಂಗಳವಾರದ ವಹಿವಾಟನ್ನು 67.28 ಅಂಕಗಳ ನಷ್ಟದೊಂದಿಗೆ 32,802.44 ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆ ಕೂಡ ದಿನದ ವಹಿವಾಟನ್ನು 9.50 ಅಂಕಗಳ ನಷ್ಟದೊಂದಿಗೆ 10,118.25 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಈ ನಡುವೆ ಜಿಎಸ್‌ಟಿ ಅನುಷ್ಠಾನದ ಬಳಿಕದಲ್ಲಿ ಸೇವಾ ಕ್ಷೇತ್ರದ ಚಟುವಟಿಕೆಗಳು ನವೆಂಬರ್‌ನಲ್ಲಿ ಕುಸಿದಿರುವ ಅಂಕಿ ಅಂಶಗಳು ಶೇರು ಮಾರುಕಟ್ಟೆಗೆ ನಿರಾಶೆ ಉಂಟುಮಾಡಿತು.
ಇಂದಿನ ವಹಿವಾಟಿನ ಟಾಪ್ ಗೇನರ್‌ಗಳು ಬಜಾಜ್ ಫೈನಾನ್ಸ್, ಎಸ್ ಬ್ಯಾಂಕ್, ಎಸ್ ಬಿ ಐ, ರಿಲಯನ್ಸ್, ಭಾರ್ತಿ ಏರ್‌ಟೆಲ್;
ಟಾಪ್ ಲೂಸರ್‌ಗಳು : ಹೀರೋ ಮೋಟೋ ಕಾರ್ಪ್, ವಿಪ್ರೋ, ಟಾಟಾ ಸ್ಟೀಲ್, ಒಎನ್‌ಜಿಸಿ, ಯುಪಿಎಲ್.