Advertisement

ಮುಂಬಯಿ ಶೇರು ಐದನೇ ದಿನವೂ ಮುನ್ನಡೆ, 60 ಅಂಕ ಏರಿಕೆ

04:15 PM Apr 11, 2018 | udayavani editorial |

ಮುಂಬಯಿ : ದಿನಪೂರ್ತಿ ಎದ್ದು ಬಿದ್ದು ಸಾಗಿದ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಬುಧವಾರದ ವಹಿವಾಟನ್ನು, ನಿರಂತರ ಐದನೇ ದಿನದ ಏರಿಕೆಯಲ್ಲಿ, 60 ಅಂಕಗಳ ಮುನ್ನಡೆಯೊಂದಿಗೆ 33,940 ಅಂಕಗಳ ಮಟ್ಟಕ್ಕೆ ಏರುವ ಮೂಲಕ ಆಶಾದಾಯಕವಾಗಿ ಕೊನೆಗೊಳಿಸಿತು.

Advertisement

ಏಶ್ಯನ್‌ ಶೇರು ಪೇಟೆಯಲ್ಲಿ ಮಿಶ್ರ ಪ್ರತಿಕ್ರಿಯೆ ತೋರಿ ಬಂದ ಹೊರತಾಗಿಯೂ ಮುಂಬಯಿ ಶೇರು ಪೇಟೆಯನ್ನು ಇಂದು ಮೆಟಲ್‌, ಐಟಿ, ಕನ್ಸೂಮರ್‌ ಡ್ನೂರೇಬಲ್‌ ಶೇರುಗಳು ಬಹುವಾಗಿ ಆಧರಿಸಿದವು. 

ಇದೇ ಶುಕ್ರವಾರದಿಂದ ಇನ್‌ಫೋಸಿಸ್‌ ನೊಂದಿಗೆ ಮುಂಚೂಣಿ ಕಂಪೆನಿಗಳ ನಾಲ್ಕನೇ ತ್ತೈಮಾಸಿಕ ಹಾಗೂ ವಾರ್ಷಿಕ ಫ‌ಲಿತಾಂಶಗಳು ಪ್ರಕಟವಾಗಲಿವೆ. ಈ ನಡುವೆ ನಾಳೆ ಗುರುವಾರ ಚಿಲ್ಲರೆ ಹಣದುಬ್ಬರ, ಕೈಗಾರಿಕಾ ಉತ್ಪಾದನೆ ಸಹಿತ ಸ್ಥೂಲ ಆರ್ಥಿಕಾಭಿವೃದ್ಧಿ ಅಂಕಿ ಅಂಶಗಳು ಪ್ರಕಟಗೊಳ್ಳಲಿವೆ. ಹಾಗಾಗಿ ಹೂಡಿಕೆದಾರರು ಮತ್ತು ವಹಿವಾಟುದಾರರ ಕಣ್ಣು ಈಗಿನ್ನು ಇವುಗಳ ಮೇಲೆ ಸಹಜವಾಗಿಯೇ ನೆಟ್ಟಿದೆ. 

ಸೆನ್ಸೆಕ್ಸ್‌ ಇಂದಿನ ವಹಿವಾಟನ್ನು 60.19 ಅಂಕಗಳ ಮುನ್ನಡೆಯೊಂದಿಗೆ 33,940.44 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿದರೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 14.90 ಅಂಕಗಳ ಮುನ್ನಡೆಯೊಂದಿಗೆ 10,417.15 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.  ಕಳೆದ ನಾಲ್ಕು ದಿನಗಳ ವಹಿವಾಟಿನಲ್ಲಿ ಸೆನ್ಸೆಕ್ಸ್‌ 861.18 ಅಂಕಗಳನ್ನು ಸಂಪಾದಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next