Advertisement

321 ಅಂಕಗಳ ಭರ್ಜರಿ ಏರಿಕೆ ದಾಖಲಿಸಿದ ಮುಂಬಯಿ ಶೇರು

04:22 PM Aug 16, 2017 | udayavani editorial |

ಮುಂಬಯಿ : ದೇಶೀಯ ಹೂಡಿಕೆದಾರರಿಂದ ಹೆಚ್ಚಿದ ಬಂಡವಾಳ ಒಳ ಹರಿವಿನ ಪರಿಣಾಮವಾಗಿ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಬುಧವಾರದ ವಹಿವಾಟನ್ನು 321.86 ಅಂಕಗಳ ಭರ್ಜರಿ ಏರಿಕೆಯೊಂದಿಗೆ 31,770.89 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿದೆ. 

Advertisement

ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 103.15 ಅಂಕಗಳ ಏರಿಕೆಯೊಂದಿಗೆ ದಿನದ ವಹಿವಾಟನ್ನು 9,897.30 ಅಂಕಗಳ ಮಟ್ಟದಲ್ಲಿ ಆಶಾದಾಯಕವಾಗಿ ಕೊನೆಗೊಳಿಸಿದೆ.

ಅತ್ಯಂತ ಧನಾತ್ಮಕವಾಗಿದ್ದ ಇಂದಿನ ವಹಿವಾಟು ಹರಹಿನಲ್ಲಿ 1,638 ಶೇರುಗಳು ಮುನ್ನಡೆ ಕಂಡವು; 946 ಶೇರುಗಳ ಹಿನ್ನಡೆಗೆ ಗುರಿಯಾದವು; 118 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.

ಸಿಪ್ಲಾ, ಟಾಟಾ ಮೋಟರ್‌, ಟೆಕ್‌ ಮಹೀಂದ್ರ ಶೇರುಗಳು ಟಾಪ್‌ ಗೇನರ್‌ಎನಿಸಿಕೊಂಡವು. ಎನ್‌ಟಿಪಿಸಿ, ಏಶ್ಯನ್‌ ಪೇಂಟ್‌, ಪವರ್‌ ಗ್ರಿಡ್‌ ಶೇರುಗಳು ಟಾಪ್‌ ಲೂಸರ್‌ ಎನಿಸಿಕೊಂಡವು. 

Advertisement

Udayavani is now on Telegram. Click here to join our channel and stay updated with the latest news.

Next