Advertisement

ನಿರಂತರ ನಾಲ್ಕನೇ ದಿನ ಕುಸಿತ: ಮುಂಬಯಿ ಶೇರು 300 ಅಂಕ ನಷ್ಟ

04:48 PM Mar 05, 2018 | |

ಮುಂಬಯಿ : ನಿರಂತರ ನಾಲ್ಕನೇ ದಿನ ಕುಸಿತವನ್ನು ಕಂಡಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಸೋಮವಾರದ ವಹಿವಾಟನ್ನು 300.16 ಅಂಕಗಳ ನಷ್ಟದೊಂದಿಗೆ 33,746.78 ಅಂಕಗಳ ಮಟ್ಟದಲ್ಲಿ, ಎರಡು ವಾರಗಳ ಕನಿಷ್ಠ ಮಟ್ಟವಾಗಿ, ನಿರಾಶಾದಾಯಕವಾಗಿ ಕೊನೆಗೊಳಿಸಿದೆ.

Advertisement

ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 99.50 ಅಂಕಗಳ ನಷ್ಟದೊಂದಿಗೆ 10,358.85 ಅಂಕಗಳ ಮಟ್ಟದಲ್ಲಿ ದಿನದ ವಹಿವಾಟನ್ನು ಕೊನೆಗೊಳಿಸಿದೆ. ಕಳೆದ 3 ದಿನಗಳ ವಹಿವಾಟಿನಲ್ಲಿ ಸೆನ್ಸೆಕ್ಸ್‌ 398.81 ಅಂಕಗಳ ನಷ್ಟವನ್ನು ಅನುಭವಿಸಿದೆ. 

ಸೆನ್ಸೆಕ್ಸ್‌ ಕಳೆದ ಫೆ.20ರಂದು 33,703.59 ಅಂಕಗಳ ಕನಿಷ್ಠ ಮಟ್ಟವನ್ನು ಕಂಡಿತ್ತು. ಆ ಬಳಿಕದ ಕನಿಷ್ಠ ಮಟ್ಟ ಇಂದಿನದ್ದಾಗಿದೆ. 

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಆಮದು ಸುಂಕ ಹೇರುವ ಪ್ರಸ್ತಾವದ ಬಗ್ಗೆ ಆಡಿರುವ ಮಾತುಗಳು ಜಾಗತಿಕ ವಾಣಿಜ್ಯ ಸಮರಕ್ಕೆ ಹೇತುವಾಗಬಹುದೆಂಬ ಭೀತಿಯಲ್ಲಿ ಮುಂಬಯಿ ಸಹಿತ ಏಶ್ಯನ್‌ ಶೇರುಪೇಟೆಗಳು ನಲುಗುತ್ತಿವೆ. 

Advertisement

Udayavani is now on Telegram. Click here to join our channel and stay updated with the latest news.

Next