ಮುಂಬಯಿ : ದಾಖಲೆ ಮಟ್ಟಕ್ಕೆ ಶೇರು ಮಾರುಕಟ್ಟೆ ಏರಿದ್ದ ಸಂದರ್ಭದಲ್ಲಿ ಒದಗಿದ ಲಾಭವನ್ನು ನಗದೀಕರಿಸಲು ವಹಿವಾಟುದಾರರು ಮುಂದಾದ ಪ್ರಯುಕ್ತ ಹಾಗೂ ಇಂದು ಬುಧವಾರ 2073 ಸಂವತ್ಸರದ ಕೊನೆಯ ವಹಿವಾಟು ದಿನವಾಗಿರುವ ಕಾರಣ ಮತ್ತು ಕೆಲವೊಂದು ಬ್ಲೂ ಚಿಪ್ ಕಂಪೆನಿಗಳ ಸೆಪ್ಟಂಬರ್ ಅಂತ್ಯದ ತ್ತೈಮಾಸಿಕ ಫಲಿತಾಂಶಗಳು ಹೆಚ್ಚು ಆಶಾದಾಯಕವಾಗಿಲ್ಲದಿರುವ ಕಾರಣ, ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ 100 ಅಂಕಗಳ ನಷ್ಟಕ್ಕೆ ಗುರಿಯಾಯಿತು.
ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ಇಂದು ಬುಧವಾರ ಮಿಶ್ರ ಪ್ರತಿಕ್ರಿಯೆ ತೋರಿ ಬಂದಿರುವುದನ್ನು ಅನುಸರಿಸಿದ ಮುಂಬಯಿ ಶೇರು ಪೇಟೆಯಲ್ಲಿ ಇಂದು ವಹಿವಾಟುದಾರರಿಂದ ಎಚ್ಚರಿಕೆಯ ನಡೆ ಕಂಡು ಬಂತು.
ಬೆಳಗ್ಗೆ 10.45ರ ಹೊತ್ತಿಗೆ ಸೆನ್ಸೆಕ್ಸ್ 113.51 ಅಂಕಗಳ ನಷ್ಟದೊಂದಿಗೆ 32,495.65 ಅಂಕಗಳ ಮಟ್ಟದಲ್ಲೂ, ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 40.50 ಅಂಕಗಳ ನಷ್ಟದೊಂದಿಗೆ 10,194.00 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇಂದಿನ ಆರಂಭಿಕ ವಹಿವಾಟಿನಲ್ಲಿ ಎಕ್ಸಿಸ್ ಬ್ಯಾಂಕ್, ರಿಲಯನ್ಸ್, ಐಸಿಐಸಿಐ ಬ್ಯಾಂಕ್, ಎಸ್‌ಬಿಐ, ಎಸ್ ಬ್ಯಾಂಕ್ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳು : ರಿಲಯನ್ಸ್, ಒಎನ್‌ಜಿಸಿ, ಕೋಟಕ್ ಮಹೀಂದ್ರ, ಪವರ್ ಗ್ರಿಡ್, ವಿಪ್ರೋ.
ಟಾಪ್ ಲೂಸರ್‌ಗಳು ಎಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಭಾತಿರ ಇನ್‌ಫ್ರಾಟೆಲ್, ಝೀ ಎಂಟರ್‌ಟೇನ್‌ಮೆಂಟ್, ಟೆಕ್ ಮಹೀಂದ್ರ.