Advertisement

ಮುಂಬಯಿ ಶೇರು 64 ಅಂಕ ಕುಸಿತ, ನಿಫ್ಟಿ 10,652 ಮಟ್ಟಕ್ಕೆ

11:13 AM Jan 29, 2019 | udayavani editorial |

ಮುಂಬಯಿ : ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಇಂದು ಮಂಗಳವಾರದ ವಹಿವಾಟನ್ನು 64.20 ಅಂಕಗಳ ನಷ್ಟದೊಂದಿಗೆ 35,592.50 ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಕೊನೆಗೊಳಿಸಿತು.

Advertisement

ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 9.35 ಅಂಕಗಳ ನಷ್ಟದೊಂದಿಗೆ ದಿನದ ವಹಿವಾಟನ್ನು 10,652.20 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.

ಚೀನ – ಅಮೆರಿಕ ವಾಣಿಜ್ಯ ಸುಂಕ ಬಿಕ್ಕಟ್ಟು ಕೊನೆಗೊಳ್ಳುವ ಲಕ್ಷಣ ತೋರಿಬಾರದ ಕಾರಣಕ್ಕೆ ಜಾಗತಿಕ ಶೇರು ಪೇಟೆಗಳು ಹಿನ್ನಡೆ ಕಂಡದ್ದನ್ನು ಅನುಸರಿಸಿ ಮುಂಬಯಿ ಶೇರು ಪೇಟೆ ಕೂಡ ಇಂದು ನಷ್ಟಕ್ಕೆ ಗುರಿಯಾಯಿತು. ಆದರೆ ಬೆಳಗ್ಗೆ 368 ಅಂಕಗಳ ನಷ್ಟವನ್ನು ಕಂಡಿದ್ದ ಸೆನ್ಸೆಕ್ಸ್‌ ಅನಂತರ ನಿಧಾನಕ್ಕೆ ಚೇತರಿಸಿಕೊಂಡು ನಷ್ಟದ ಪ್ರಮಾಣವನ್ನು ಕಡಿಮೆ ಮಾಡಿಕೊಂಡದ್ದೇ ಒಂದು ಸಾಧನೆ ಎನಿಸಿತು. 

ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು  2,660 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,133 ಶೇರುಗಳು ಮುನ್ನಡೆ ಸಾಧಿಸಿದವು; 1,383 ಶೇರುಗಳು ಹಿನ್ನಡೆಗೆ ಗುರಿಯಾದವು; 144 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next