ಮುಂಬಯಿ : ವಾಣಿಜ್ಯ ಸಮರ ಭೀತಿ ಇನ್ನೂ ನಿವಾರಣೆಯಾಗದಿರುವುದು, ವಿದೇಶಿ ಬಂಡವಾಳದ ನಿರಂತರ ಹೊರ ಹರಿವು ಎಗ್ಗಿಲ್ಲದೆ ಸಾಗಿರುವುದು, ಲಾಭನಗದೀಕರಣದ ಶೇರು ಮಾರಾಟ ಮತ್ತೆ ನಡೆದಿರುವುದು ಹಾಗೂ ಜಾಗತಿಕ ಶೇರು ಪೇಟೆಗಳಲ್ಲಿ ದುರ್ಬಲ ಪ್ರವೃತ್ತಿ ತೋರಿ ಬಂದಿರುವುದು – ಇವೇ ಮೊದಲಾದ ಕಾರಣಗಳಿಂದಾಗಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಬುಧವಾರದ ಆರಂಭಿಕ ವಹಿವಾಟಿನಲ್ಲಿ 59 ಅಂಕಗಳ ಕುಸಿತಕ್ಕೆ ಗುರಿಯಾಯಿತು.
ನಿನ್ನೆ 114.19 ಅಂಕಗಳ ಜಿಗಿತವನ್ನು ಸಾಧಿಸಿದ್ದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಬೆಳಗ್ಗೆ 10.45ರ ಹೊತ್ತಿಗೆ ಸ್ವಲ್ಪ ಮಟ್ಟಿನ ಚೇತರಿಕೆಯನ್ನು ದಾಖಲಿಸಿ 35,387.00 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ 0.70 ಅಂಕಗಳ ಏರಿಕೆಯನ್ನು ದಾಖಲಿಸಿ 10,700.60 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಡಾಲರ್ ಎದುರು ರೂಪಾಯಿ ಇಂದು 10 ಪೈಸೆಯ ಚೇತರಿಕೆಯನ್ನು ಕಂಡು 68.47 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಮುಂಬಯಿ ಶೇರು ಪೇಟೆಯ ಇಂದಿನ ಆರಂಭಿಕ ವಹಿವಾಟಿನಲ್ಲಿ ವೇದಾಂತ, ಒಎನ್‌ಜಿಸಿ, ಟಾಟಾ ಮೋಟರ್, ಅದಾನಿ ಪೋರ್ಟ್, ಎಸ್‌ಬಿಐ, ಎಸ್ ಬ್ಯಾಂಕ್, ಟಾಟಾ ಸ್ಟೀಲ್, ಟಿಸಿಎಸ್, ಭಾರ್ತಿ ಏರ್‌ಟೆಲ್, ಹೀರೋ ಮೋಟೋ ಕಾರ್ಪ್, ಇನ್‌ಫೋಸಿಸ್,ವಿಪ್ರೋ ಶೇರುಗಳು ಶೇ.1.91ರ ನಷ್ಟಕ್ಕೆ ಗುರಿಯಾದವು.
ಇಂದು ಬೆಳಗ್ಗಿನ ವೇಳೆಯ ಟಾಪ್ ಗೇನರ್‌ಗಳು : ಲೂಪಿನ್, ಡಾ. ರೆಡ್ಡಿ, ಸನ್ ಫಾರ್ಮಾ, ಬಜಾಜ್ ಫಿನ್ ಸರ್ವ್, ಎಚ್ ಡಿ ಎಫ್ ಸಿ; ಟಾಪ್ ಲೂಸರ್‌ಗಳು : ಐಡಿಯಾ ಸೆಲ್ಯುಲರ್, ಗ್ರಾಸಿಂ, ವೇದಾಂತ, ಬಿಪಿಸಿಎಲ್, ಎಚ್‌ಪಿಸಿಎಲ್.