Advertisement

ಕ್ರಿಸ್‌ಮುಸ್‌ ಮುನ್ನಾ ದಿನ 56 ಅಂಕ ಕುಸಿದ ಮುಂಬಯಿ ಶೇರು

11:11 AM Dec 24, 2018 | udayavani editorial |

ಮುಂಬಯಿ : ಕ್ರಿಸ್‌ಮಸ್‌ ರಜಾದಿನಕ್ಕೆ ಮುನ್ನಾ ದಿನವಾದ ಇಂದು ಸೋಮವಾರ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಆರಂಭಿಕ ವಹಿವಾಟಿನಲ್ಲಿ ಹಿನ್ನಡೆಗೆ ಗುರಿಯಾಯಿತು. ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ತೋರಿಬಂದ ನಿಸ್ತೇಜ, ಲಾಭನಗದೀಕರಣ ಇವೇ ಮೊದಲಾದ ಕಾರಣಗಳು ಮುಂಬಯಿ ಶೇರು ಹಿನ್ನಡೆಗೆ ಕಾರಣಾವಾದವು. 

Advertisement

ಬೆಳಗ್ಗೆ 11 ಗಂಟೆಯ ಸುಮಾರಿಗೆ ಸೆನ್ಸೆಕ್ಸ್‌ 56.91 ಅಂಕಗಳ ನಷ್ಟದೊಂದಿಗೆ 35,685.16 ಅಂಕಗಳ ಮಟ್ಟದಲ್ಲೂ  ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 25.60 ಅಂಕಗಳ ನಷ್ಟದೊಂದಿಗೆ 10,728.40 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು. 

ಇಂದಿನ ಬೆಳಗ್ಗಿನ ವಹಿವಾಟಿನಲ್ಲಿ ಇನ್‌ಫೋಸಿಸ್‌, ಮಾರುತಿ ಸುಜುಕಿ, ಎಸ್‌ ಬ್ಯಾಂಕ್‌, ರಿಲಯನ್ಸ್‌, ಸನ್‌ ಫಾರ್ಮಾ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.

ಟಾಪ್‌ ಗೇನರ್‌ಗಳು : ಟಿಸಿಎಸ್‌, ಇನ್‌ಫೋಸಿಸ್‌, ಐಟಿಸಿ, ಎಚ್‌ಪಿಸಿಎಲ್‌, ಸನ್‌ ಫಾರ್ಮಾ; ಟಾಪ್‌ ಗೇನರ್‌ಗಳು : ಜೆಎಸ್‌ಡಬ್ಲ್ಯು ಸ್ಟೀಲ್‌, ಹೀರೋ ಮೋಟೋ ಕಾರ್ಪ್‌, ಬಜಾಜ್‌ ಆಟೋ, ಏಶ್ಯನ್‌ ಪೇಂಟ್‌, ಝೀ ಎಂಟರ್‌ಟೇನ್‌ಮೆಂಟ್‌

Advertisement

Udayavani is now on Telegram. Click here to join our channel and stay updated with the latest news.

Next