ಮುಂಬಯಿ : ನಿರಂತರ ನಾಲ್ಕು ದಿನಗಳಿಂದಲೂ ನಷ್ಟದ ಹಾದಿಯಲ್ಲಿ ಸಾಗಿ ಬಂದಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಸೋಮವಾರದ ವಹಿವಾಟನ್ನು 310 ಅಂಕಗಳ ನಷ್ಟದೊಂದಿಗೆ 34,757.16 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿದೆ.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡ 94 ಅಂಕಗಳ ಕುಸಿತವನ್ನು ದಾಖಲಿಸಿ ದಿನದ ವಹಿವಾಟನ್ನು 10,667 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿದೆ.
ಶೇರು ಮಾರುಕಟ್ಟೆಗೆ ಬಜೆಟ್‌ನಿಂದ ಉಂಟಾಗಿರುವ ನಿರಾಶೆಗಿಂತಲೂ ಮಿಗಿಲಾಗಿ ವಿಶ್ವಾದ್ಯಂತದ ಶೇರು ಮಾರುಕಟ್ಟೆಗಳು ಕುಸಿಯ ತೊಡಗಿರುವುದೇ ಮುಂಬಯಿ ಶೇರು ಪೇಟೆಗೆ ಚಿಂತೆಯ ವಿಷಯವಾಗಿ ಪರಿಣಮಿಸಿದೆ. ಹಾಗಾಗಿ ಕಳೆದ ಐದು ದಿನಗಳಿಂದಲೂ ಸೆನ್ಸೆಕ್ಸ್ ನಷ್ಟದ ಹಾದಿಯಲ್ಲಿ ಸಾಗಿ ಬರುವಂತಾಗಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.
ಕಳೆದ ನಾಲ್ಕು ದಿನಗಳ ವಹಿವಾಟಿನಲ್ಲಿ ಸೆನ್ಸೆಕ್ಸ್ ಒಟ್ಟು 1,216.50 ಅಂಕಗಳ ನಷ್ಟವನ್ನು ಅನಭವಿಸಿದೆ.
ಮುಂಬಯಿ ಶೇರು ಪೇಟೆಯಲ್ಲಿನ ಇಂದಿನ ಟಾಪ್ ಗೇನರ್‌ಗಳು : ಭಾರ್ತಿ ಏರ್‌ಟೆಲ್, ಟಾಟಾ ಮೋಟರ್, ಎಚ್‌ಪಿಸಿಎಲ್, ಬಾಶ್, ಪವರ್ ಗ್ರಿಡ್; ಟಾಪ್ ಲೂಸರ್‌ಗಳು : ಎಚ್ ಡಿ ಎಫ್ ಸಿ, ಲಾರ್ಸನ್, ಇಂಡಸ್‌ಇಂಡ್ ಬ್ಯಾಂಕ್, ಅದಾನಿ ಪೋರ್ಟ್, ಕೋಟಕ್ ಮಹೀಂದ್ರ.
ಮುಂಬಯಿ ಶೇರು ಪೇಟೆಯಲ್ಲಿಂದು ವಹಿವಾಟಿಗೆ ಒಳಪಟ್ಟ ಶೇರುಗಳು ; 2,976; ಮುನ್ನಡೆ ಕಂಡವು: 1,084, ಹಿನ್ನಡೆಗೆ ಗುರಿಯಾದವು: 1,687, ಯಾವುದೇ ಬದಲಾವಣೆ ಕಾಣದವು: 205.