ಮುಂಬಯಿ : ಆರಂಭಿಕ ವಹಿವಾಟಿಗೆ 117 ಅಂಕಗಳ ಜಿಗಿತ ಸಾಧಿಸಿದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಅನಂತರ 10.35ರ ಸುಮಾರಿಗೆ ಕುಸಿತಕ್ಕೆ ಗುರಿಯಾಗಿ 21.70 ಅಂಕಗಳ ನಷ್ಟದೊಂದಿಗೆ 36,519.93 ಅಂಕಗಳ ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ವಿದೇಶಿ ಬಂಡವಾಳದ ನಿರಂತರ ಹೊರ ಹರಿವು, ಏಶ್ಯನ್ ಶೇರು ಪೇಟೆಗಳಲ್ಲಿ ತೋರಿ ಬಂದ ದುರ್ಬಲ ಪ್ರವೃತ್ತಿ, ಲಾಭ ನಗದೀಕರಣದ ಶೇರು ಮಾರಾಟ ಇವೇ ಮೊದಲಾದ ಕಾರಣಗಳು ಸೆನ್ಸೆಕ್ಸ್ ಕುಸಿತಕ್ಕೆ ಕಾರಣವಾದವು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 21.10 ಅಂಕಗಳ ನಷ್ಟಕ್ಕೆ ಗುರಿಯಾಗಿ 10,997.80 ಅಂಕಗಳ ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಇಂದಿನ ಆರಂಭಿಕ ವಹಿವಾಟಿನಲ್ಲಿ ಡಾಲರ್ ಎದುರು ಆರು ಪೈಸೆ ಕುಸಿದ ರೂಪಾಯಿ 68.59 ಅಂಕಗಳ ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಇಂದಿನ ಬೆಳಗ್ಗಿನ ವಹಿವಾಟಿನಲ್ಲಿ ಇನ್‌ಫೋಸಿಸ್, ರಿಲಯನ್ಸ್, ಡಾ. ರೆಡ್ಡಿ ಲ್ಯಾಬ್, ಐಸಿಐಸಿಐ ಬ್ಯಾಂಕ್, ಎಚ್ ಡಿ ಎಫ್ ಸಿ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳು : ಇನ್‌ಫೋಸಿಸ್, ಏಶ್ಯನ್ ಪೇಂಟ್ಸ್, ಟೆಕ್ ಮಹೀಂದ್ರ, ಎಚ್ ಯು ಎಲ್, ಐಡಿಯಾ ಸೆಲ್ಯುಲರ್; ಟಾಪ್ ಲೂಸರ್‌ಗಳು : ಡಾ. ರೆಡ್ಡಿ ಲ್ಯಾಬ್, ಐಸಿಐಸಿಐ ಬ್ಯಾಂಕ್, ಸನ್ ಫಾರ್ಮಾ, ಲೂಪಿನ್, ಟಾಟಾ ಸ್ಟೀಲ್.