ಮುಂಬಯಿ : ನಿರಂತರ ನಾಲ್ಕನೇ ದಿನವೂ ನಷ್ಟದ ಹಾದಿಯಲ್ಲಿ ಸಾಗಿರುವ ಮುಂಬಯ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 205 ಅಂಕಗಳ ನಷ್ಟಕ್ಕೆ ಗುರಿಯಾಗಿ 34,000 ಅಂಕಗಳಿಗಿಂತ ಕೆಳ ಮಟ್ಟಕ್ಕೆ ಜಾರಿತು.
ಡಾಲರ್ ಎದುರು ರೂಪಾಯಿ ಇಂದು 23 ಪೈಸೆ ಕುಸಿದು 73.79 ರೂ. ಮಟ್ಟ ಇಳಿದಿರುವುದು ಕೂಡ ಶೇರು ಮಾರುಕಟ್ಟೆಯ ಮೇಲೆ ನೇತ್ಯಾತ್ಮಕ ಪರಿಣಾಮ ಬೀರಿತು. ಇದೇ ವೇಳೆ ಏಶ್ಯನ್ ಶೇರು ಪೇಟೆಯಲ್ಲಿ ಕಂಡು ಬಂದ ದೌರ್ಬಲ್ಯ ಮತ್ತು ನಿರಂತರವಾಗಿ ಸಾಗಿರುವ ವಿದೇಶಿ ಬಂಡವಾಳದ ಹೊರ ಹರಿವು ಮುಂಬಯಿ ಶೇರು ಪೇಟೆಯಲ್ಲಿ ನಡುಕ ಉಂಟು ಮಾಡಿತು.
ಕಳೆದ ಮೂರು ದಿನಗಳ ನಿರಂತರ ವಹಿವಾಟಿನಲ್ಲಿ ಸೆನ್ಸೆಕ್ಸ್ 1,028 ಅಂಕಗಳ ನಷ್ಟಕ್ಕೆ ಗುರಿಯಾಗಿದೆ.
ಇಂದು ಬೆಳಗ್ಗೆ 10.50ರ ಹೊತ್ತಿಗೆ 67.25 ಅಂಕಗಳ ನಷ್ಟದೊಂದಿಗೆ 34,067.13 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ 28.30 ಅಂಕಗಳ ನಷ್ಟದೊಂದಿಗೆ 10,217.00 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇಂಡಸ್ ಇಂಡ್ ಬ್ಯಾಂಕ್, ರಿಲಯನ್ಸ್, ಬಜಾಜ್ ಫಿನಾನ್ಸ್, ಏಶ್ಯನ್ ಪೇಂಟ್, ಎಚ್ ಡಿ ಎಫ್ ಸಿ ಬ್ಯಾಂಕ್ ಶೇರುಗಳು ಇಂದಿನ ಬೆಳಗ್ಗಿನ ವಹಿವಾಟಿನಲ್ಲಿ ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳು : ಇಂಡಿಯಾ ಬುಲ್ಸ್ ಹೌಸಿಂಗ್, ಇಂಡಸ್ ಇಂಡ್ ಬ್ಯಾ,ಕ್, ಟಾಟಾ ಮೋಟರ್, ಎಚ್ ಡಿ ಎಫ್ ಸಿ, ಎಸ್ ಬ್ಯಾಂಕ್ ; ಟಾಪ್ ಲೂಸರ್‌ಗಳು : ಏಶ್ಯನ್ ಪೇಂಟ್, ವಿಪ್ರೋ, ಬಿಪಿಸಿಎಲ್, ಸನ್ ಫಾರ್ಮಾ, ಭಾರ್ತಿ ಇನ್‌ಫ್ರಾಟೆಲ್.