Advertisement

ಏಶ್ಯನ್‌ ಪೇಟೆ ನಿಸ್ತೇಜ: ಮುಂಬಯಿ ಶೇರು 113 ಅಂಕ ಕುಸಿತ

10:53 AM Dec 12, 2017 | udayavani editorial |

ಮುಂಬಯಿ : ಏಶ್ಯನ್‌ ಶೇರು ಮಾರುಕಟ್ಟೆಯಲ್ಲಿ ಮಿಶ್ರ ಪ್ರತಿಕ್ರಿಯೆ ತೋರಿ ಬಂದಿರುವುದು ಹಾಗೂ ಇಂದು ಮ್ಯಾಕ್ರೋ ಡಾಟಾ ಬಹಿರಂಗವಾಗಲಿರುವ ಹಿನ್ನೆಲೆಯಲ್ಲಿ ಹೂಡಿಕೆದಾರರ ಮತ್ತು ವಹಿವಾಟುದಾರರು ಎಚ್ಚರಿಕೆಯ ನಡೆ ತೋರಿದ ಕಾರಣ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 94 ಅಂಕಗಳಷ್ಟು ಮುಗ್ಗರಿಸಿತು

Advertisement

ಬ್ಯಾಂಕಿಂಗ್‌, ಪವರ್‌, ಎಫ್ಎಂಸಿಜಿ ಮತ್ತು ರಿಯಲ್ಟಿ ಶೇರುಗಳು ಇಂದು ತೀವ್ರ ಮಾರಾಟ ಒತ್ತಡಕ್ಕೆ ಗುರಿಯಾದವು. ಡಾಲರ್‌ ಎದುರು ರೂಪಾಯಿ ವಿನಿಮಯದರ ಇಂದು ಬೆಳಗ್ಗೆ 8 ಪೈಸೆಯಷ್ಟು ಕುಸಿದು 64.45 ರೂ. ಮಟ್ಟಕ್ಕೆ ಇಳಿಯಿತು. 

ಬೆಳಗ್ಗೆ 10.45ರ ಹೊತ್ತಿಗೆ ಸೆನ್ಸೆಕ್ಸ್‌ 113.29 ಅಂಕಗಳ ನಷ್ಟದೊಂದಿಗೆ 33,342.50 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 46.40 ಅಂಕಗಳ ನಷ್ಟದೊಂದಿಗೆ 10,275.90 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.

ಡಾ. ರೆಡ್ಡೀಸ್‌ ಲ್ಯಾಬ್‌, ಗೇಲ್‌, ವೇದಾಂತ, ಒಎನ್‌ಜಿಸಿ ಮತ್ತು ಹಿಂಡಾಲ್ಕೊ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು. 

Advertisement

Udayavani is now on Telegram. Click here to join our channel and stay updated with the latest news.

Next