ಮುಂಬಯಿ : ಅಮೆರಿಕ ಮತ್ತು ಉತ್ತರ ಕೊರಿಯ ನಡುವಿನ ವಾಕ್ಸಮರ ಮುಂದುವರಿದಿದ್ದು ಜಾಗತಿಕ ಹಾಗೂ ಏಶ್ಯನ್ ಶೇರು ಮಾರುಕಟ್ಟೆಗಳಲ್ಲಿ ಕಳವಳದ ಛಾಯೆ ಕಂಡು ಬಂದಿರುವುದನ್ನು ಅನುಸರಿಸಿ ಮುಂಬಯಿ ಶೇರು ಪೇಟೆ ಇಂದು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 59 ಅಂಕಗಳ ಹಿನ್ನಡೆಗೆ ಗುರಿಯಾಯಿತು.
ಕಳೆದ ಐದು ದಿನಗಳ ನಿರಂತರ ಬೀಳು ಹಾದಿಯ ವಹಿವಾಟಿನಲ್ಲಿ ಸೆನ್ಸೆಕ್ಸ್ ಒಟ್ಟು 797.13 ಅಂಕಗಳ ನಷ್ಟಕ್ಕೆ ಗುರಿಯಾಗಿದೆ.
ಇಂದು ಮಂಗಳವಾರ ಬೆಳಗ್ಗೆ 10.49ರ ಹೊತ್ತಿಗೆ ಸೆನ್ಸೆಕ್ಸ್ 112.80 ಅಂಕಗಳ ನಷ್ಟದೊಂದಿಗೆ 31,513.83 ಅಂಕಗಳ ಮಟ್ಟದಲ್ಲೂ, ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 39.35 ಅಂಕಗಳ ನಷ್ಟದೊಂದಿಗೆ 9,833.25 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತ ವಾಗಿದ್ದವು.
ಇಂದು ಬ್ಯಾಂಕ್ ನಿಫ್ಟಿ 88.65 ಅಂಕಗಳ ನಷ್ಟಕ್ಕೆ ಗುರಿಯಾದರೆ ಐಟಿ ನಿಫ್ಟಿ 43.80 ಅಂಕಗಳ ನಷ್ಟವನ್ನು ಅನುಭವಿಸಿತು.
ಇಂದು ವೇದಾಂತ, ಎಚ್ ಡಿ ಎಫ್ ಸಿ, ಒಎನಿjಸಿ, ಅರಬಿಂದೋ ಫಾರ್ಮಾ, ರಿಲಯನ್ಸ್ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳು : ಒಎನ್‌ಜಿಸಿ, ವೇದಾಂತ, ಹಿಂಡಾಲ್ಕೊ, ಅದಾನಿ ಪೋರ್ಟ್, ಸನ್ ಫಾರ್ಮಾ; ಟಾಪ್ ಲೂಸರ್‌ಗಳು : ಬಿಪಿಸಿಎಲ್, ಎಚ್‌ಯುಎಲ್, ಡಾ. ರೆಡ್ಡಿ, ಏಶ್ಯನ್ ಪೇಂಟ್, ಟಾಟಾ ಪವರ್