ಮುಂಬಯಿ : ಆರ್‌ಬಿಐ ನಾಳೆ ಬುಧವಾರ ತನ್ನ ಹಣಕಾಸು ನೀತಿಯನ್ನು ಪ್ರಕಟಿಸಲಿರುವ ಕಾರಣಕ್ಕೆ ಎಚ್ಚರಿಕೆಯ ನಡೆ ತೋರಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಇಂದು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 102 ಅಂಕಗಳ ಹಿನ್ನಡೆಯನ್ನು ಕಂಡಿತು.
ಮಧ್ಯಾಹ್ನ 12.10ರ ಹೊತ್ತಿಗೆ ಸೆನ್ಸೆಕ್ಸ್ 40.27 ಅಂಕಗಳ ನಷ್ಟದೊಂದಿಗೆ 34,971.62 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 17 ಅಂಕಗಳ ನಷ್ಟದೊಂದಿಗೆ 10,611.50 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಎಚ್ ಡಿ ಎಫ್ ಸಿ ಬ್ಯಾಂಕ್, ರಿಲಯನ್ಸ್, ಎಸ್‌ಬಿಐ, ಮಾರುತಿ ಸುಜುಕಿ, ಟಿಸಿಎಸ್ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳು : ಸಿಪ್ಲಾ, ರಿಲಯನ್ಸ್, ಬಜಾಜ್ ಫಿನಾನ್ಸ್, ಟೆಕ್ ಮಹೀಂದ್ರ, ಮಾರುತಿ ಸುಜುಕಿ;
ಟಾಪ್ ಲೂಸರ್‌ಗಳು : ಐಡಿಯಾ ಸೆಲ್ಯುಲರ್, ಝೀ ಎಂಟರ್‌ಟೇನ್‌ಮೆಂಟ್, ಭಾರ್ತಿ ಏರ್‌ಟೆಲ್, ಕೋಲ್ ಇಂಡಿಯಾ, ಪವರ್ ಗ್ರಿಡ್.
ಡಾಲರ್ ಎದುರು ರೂಪಾಯಿ ಇಂದಿನ ಆರಂಭಿಕ ವಹಿವಾಟಿನಲ್ಲಿ 5 ಪೈಸೆ ಕುಸಿತವನ್ನು ಕಂಡು 67.16 ರೂ. ಮಟ್ಟಕ್ಕೆ ಇಳಿಯಿತು.