Advertisement

271 ಅಂಕ ಕುಸಿದ ಮುಂಬಯಿ ಶೇರು; ಶೇ.9.6 ಕುಸಿದ ಇನ್ಫಿ ಶೇರು

04:20 PM Aug 18, 2017 | udayavani editorial |

ಮುಂಬಯಿ : ಭಾರತೀಯ ಐಟಿ ದಿಗ್ಗಜ ಇನ್‌ಫೋಸಿಸ್‌ ಸಂಸ್ಥೆಯ ಎಂಡಿ ಹಾಗೂ ಸಿಇಓ ಆಗಿರುವ ವಿಶಾಲ್‌ ಸಿಕ್ಕಾ ಅವರಿಂದು ಹಠಾತ್ತನೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಕಾರಣ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಶುಕ್ರವಾರದ ವಹಿವಾಟನ್ನು 270.78 ಅಂಕಗಳ ನಷ್ಟದೊಂದಿಗೆ 31,524.68 ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಕೊನೆಗೊಳಿಸಿತು.

Advertisement

ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡ 66.75 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 9,837.40 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. 

ಸಿಕ್ಕಾ ರಾಜೀನಾಮೆಯ ಕಾರಣ ತೀವ್ರ ಮಾರಾಟದ ಒತ್ತಡಕ್ಕೆ ಗುರಿಯಾದ ಇನ್‌ಫೋಸಿಸ್‌ ಶೇರುಗಳು ಶೇ.9.60 ಪ್ರಮಾಣದಲ್ಲಿ ಕುಸಿತಕ್ಕೆ ಗುರಿಯಾಗಿ 884.40 ರೂ.ಗಳ ತಳವನ್ನು ಕಂಡು
ಅಂತಿಮವಾಗಿ 923.10 ರೂ. ಮಟ್ಟದಲ್ಲಿ ನೆಲೆಗೊಂಡವು. 

ಈ ವಾರದಲ್ಲಿ ಸೆನ್ಸೆಕ್ಸ್‌  ಮತ್ತು ನಿಫ್ಟಿ ಅನುಕ್ರಮವಾಗಿ 311.09 ಅಂಕ (ಶೇ.0.99) ಮತ್ತು 126.60 (ಶೇ.1.30) ಅಂಕಗಳ ಏರಿಕೆಯನ್ನು ದಾಖಲಿಸಿವೆ. ಇದು ಕಳೆದ ಏಳು ವಾರಗಳಲ್ಲಿ ಶೇರು ಮಾರುಕಟ್ಟೆಯು ದಾಖಲಿಸಿರುವ ಆರನೇ ಬಾರಿಯ ವಾರಂತ್ಯದ ಏರಿಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next