ಮುಂಬಯಿ : ಅಮೆರಿಕ ಸರಕಾರದ ಮುಗಿಯದ ಶಟ್ ಡೌನ್ ಮತ್ತು ಜಾಗತಿಕ ಆರ್ಥಿಕತೆಗೆ ಹಿನ್ನಡೆಯ ಭೀತಿಯೇ ಮೊದಲಾದ ಕಾರಣಗಳಿಂದಾಗಿ ನಡೆದ ಭರಾಟೆಯ ಶೇರು ಮಾರಾಟದಿಂದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಬುಧವಾರದ ಆರಂಭಿಕ ವಹಿವಾಟನಲ್ಲಿ 350ಕ್ಕೂ ಅಧಿಕ ಅಂಕಗಳ ನಷ್ಟಕ್ಕೆ ಗುರಿಯಾಯಿತು.
ಬೆಳಗ್ಗೆ 11 ಗಂಟೆಯ ಹೊತ್ತಿಗೆ ಸೆನ್ಸೆಕ್ಸ್ 389.54 ಅಂಕಗಳ ನಷ್ಟದೊಂದಿಗೆ 35,080.61 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯ,ಕ 109.30 ಅಂಕಗಳ ನಷ್ಟದೊಂದಿಗೆ 10,554.20 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಡಾಲರ್ ಎದುರು ರೂಪಾಯಿ ಇಂದಿನ ಆರಂಭಿಕ ವಹಿವಾಟಿನಲ್ಲಿ 19 ಪೈಸೆಗಳ ಸುಧಾರಣೆಯನ್ನು ಕಂಡು 69.95 ರೂ. ಮಟ್ಟಕ್ಕೆ ಏರಿರುವುದು ಸಮಾಧಾನದ ವಿಷಯವೆನಿಸಿತು.
ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ ಎಸ್ ಬ್ಯಾಂಕ್, ಝೀ ಎಂಟರ್‌ಟೇನ್‌ಮೆಂಟ್, ರಿಲಯನ್ಸ್, ಇನ್‌ಫೋಸಿಸ್, ಮಾರುತಿ ಸುಜುಕಿ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳು : ಝೀ ಎಂಟರ್‌ಟೇನ್‌ಮೆಂಟ್, ಅದಾನಿ ಪೋರ್ಟ್, ಹೀರೋ ಮೋಟೋ ಕಾರ್ಪ್, ಯುಪಿಎಲ್, ಐಟಿಸಿ; ಟಾಪ್ ಲೂಸರ್‌ಗಳು : ಎಸ್ ಬ್ಯಾಂಕ್, ಇಂಡಿಯಾ ಬುಲ್ಸ್ ಹೌಸಿಂಗ್, ಟಾಟಾ ಮೋಟರ್, ಸನ್ ಫಾರ್ಮಾ, ಇಂಡಸ್‌ಇಂಡ್ ಬ್ಯಾಂಕ್.