ಮುಂಬಯಿ : ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಸೋಮವಾರ 157.55 ಅಂಕಗಳ ಏರಿಕೆಯನ್ನು ದಾಖಲಿಸುವ ಮೂಲಕ 37,494.40 ಅಂಕಗಳ ಹೊಸ ದಾಖಲೆಯ ಎತ್ತರವನ್ನು ತಲುಪುವ ಸಾಧನೆಯನ್ನು ಮಾಡಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 41.20 ಅಂಕಗಳ ಏರಿಕೆಯೊಂದಿಗೆ ದಿನದ ವಹಿವಾಟನ್ನು 11,300ಕ್ಕೆ ಮೀರಿದ ಮಟ್ಟದಲ್ಲಿ ಇದೇ ಮೊದಲ ಬಾರಿಗೆಂಬಂತೆ ಸಮಾಪನಗೊಳಿಸಿತು.
ಇಂದಿನ ಟಾಪ್ ಗೇನರ್‌ಗಳು : ಭಾರ್ತಿ ಏರ್‌ಟೆಲ್, ಐಸಿಐಸಿಐ ಬ್ಯಾಂಕ್, ಎಸ್‌ಬಿಐ, ಐಡಿಯಾ ಸೆಲ್ಯುಲರ್, ಎಕ್ಸಿಸ್ ಬ್ಯಾಂಕ್; ಟಾಪ್ ಲೂಸರ್‌ಗಳು : ಎಚ್‌ಸಿಎಲ್ ಟೆಕ್, ಇನ್‌ಫೋಸಿಸ್, ಎಚ್ ಡಿ ಎಫ್ ಸಿ ಬ್ಯಾಂಕ್, ಬಜಾಜ್ ಫಿನಾನ್ಸ್, ಲಾರ್ಸನ್.
ಮುಂಬಯಿ ಶೇರು ಮಾರುಕಟ್ಟೆಯಲ್ಲಿ ಇಂದು ಒಟ್ಟು 2,846 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; 1,606 ಶೇರುಗಳು ಮುನ್ನಡೆ ಸಾಧಿಸಿದವು; 1,057 ಶೇರುಗಳು ಹಿನ್ನಡೆಗೆ ಗುರಿಯಾದವು; 183 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.
ಕಳೆದ ಐದು ದಿನಗಳ ವಹಿವಾಟಿನಲ್ಲಿ ಸೆನ್ಸೆಕ್ಸ್ ಒಟ್ಟು 840.48 ಅಂಕಗಳನ್ನು ಸಂಪಾದಿಸಿರುವುದು ಗಮನಾರ್ಹವಾಗಿದೆ. ಅಂತೆಯೇ ಕಳೆದ ಶುಕ್ರವಾರದ ವಹಿವಾಟಿನಲ್ಲಿ ಸೆನೆಕ್ಸ್ ಸಾರ್ವಕಾಲಿ ದಾಖಲೆಯ ಎತ್ತರವಾಗಿ 37,336.85 ಅಂಕಗಳ ಮಟ್ಟವನ್ನು ತಲುಪಿತ್ತು.
ಆರ್ ಬಿ ಐ ದ್ವೆ„ಮಾಸಿಕ ನೀತಿ ನಿರ್ಧಾರದ ಸಭೆಯ ಇಂದು ನಡೆಯವುದಕ್ಕೆ ಮುನ್ನವೇ ಸೆನ್ಸೆಕ್ಸ್ ಮತ್ತು ನಿಫ್ಟಿ ಈ ಹೊಸ ದಾಖಲೆಗಳನ್ನು ಮಾಡಿರುವುದು ಗಮನಾರ್ಹವಾಗಿದೆ.