ಮುಂಬಯಿ : ಜನವರಿ ತಿಂಗಳ ವಾಯಿದೆ ವಹಿವಾಟು ಚುಕ್ತಾ ಮಾಡುವ ಅಂತಿಮ ದಿನವಾದ ಇಂದು ಗುರುವಾರ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ 85 ಅಂಕಗಳ ಏರಿಕೆಯನ್ನು ಪಡೆದುಕೊಂಡಿತು.
ವಿದೇಶಿ ಹೂಡಿಕೆ ನಿರತಂತರವಾಗಿ ಹರಿದು ಬರುತ್ತಿರುವ ಕಾರಣ ಶೇರು ಪೇಟೆಯಲ್ಲಿ ತೇಜಿ ಕಂಡುಬಂದಿದ್ದು ಇಂದು ಬ್ಯಾಂಕಿಂಗ್ ಮತ್ತು ಫಾರ್ಮಾ ಶೇರುಗಳು ಉತ್ತಮ ಬೇಡಿಕೆಯನ್ನು ಪಡೆದವು.
ಸೆನ್ಸೆಕ್ಸ್ ಕಳದ ಆರು ದಿನಗಳ ನಿರಂತದ ಏರು ಗತಿಯ ವಹಿವಾಟಿನಲ್ಲಿ ಸೆನ್ಸೆಕ್ಸ್ 1,390.53 ಅಂಕಗಳನ್ನು ಸಂಪಾದಿಸಿದೆ.
ಡಾಲರ್ ಎದುರು ರೂಪಾಯಿ ಇಂದು ಬೆಳಗ್ಗಿನ ವಹಿವಾಟಿನಲ್ಲಿ 22 ಪೈಸೆಯಷ್ಟು ಸುಧಾರಿಸಿರುವುದು ಶೇರು ಮಾರುಕಟ್ಟೆಗೆ ವಿಶ್ವಾಸ ತುಂಬಿತು.
ಆದರೆ ಬೆಳಗ್ಗೆ 10.5ರ ಹೊತ್ತಿಗೆ ಸೆನ್ಸೆಕ್ಸ್ ತನ್ನೆಲ್ಲ ಆರಂಭಿಕ ಗಳಿಕೆಯನ್ನು ಬಿಟ್ಟುಕೊಟ್ಟು 69.07 ಅಂಕಗಳ ನಷ್ಟದೊಂದಿಗೆ 36,092.57 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 12.20 ಅಂಕಗಳ ನಷ್ಟದೊಂದಿಗೆ 11,073.80 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇಂದಿನ ಬೆಳಗ್ಗಿನ ವಹಿವಾಟಿನಲ್ಲಿ ಎಸ್‌ಬಿಐ, ಭಾರ್ತಿ ಏರ್‌ಟೆಲ್, ವೇದಾಂತ, ಲಾರ್ಸನ್, ರಿಲಯನ್ಸ್ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.