ಮುಂಬಯಿ : ನಾಲ್ಕು ದಿನಗಳ ನಿರಂತರ ಸೋಲನ್ನು ಕೊನೆಗೂ ಕೊನೆಗೊಳಿಸಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಸೋಮವಾರದ ವಹಿವಾಟನ್ನು 37 ಅಂಕಗಳ ಏರಿಕೆಯೊಂದಿಗೆ 32,870 ಅಂಕಗಳ ಮಟ್ಟದಲ್ಲಿ ಮುಗಿಸಿದೆ.
ಹೂಡಿಕೆದಾರರು ಮತ್ತು ವಹಿವಾಟುದಾರರು ಐಟಿ, ಟೆಕ್, ಮೆಟಲ್ ಮತ್ತು ಹೆಲ್ತ್ ಕೇರ್ ರಂಗದ ಮುಂಚೂಣಿ ಶೇರುಗಳ ಖರೀದಿಯಲ್ಲಿ ಉತ್ತಮ ಆಸಕ್ತಿ ತೋರಿದ ಕಾರಣ ಸೆನ್ಸೆಕ್ಸ್ ಇಂದು ನಾಲ್ಕು ದಿನಗಳ ಬಳಿಕ ಮತ್ತೆ ಪುಟಿದೆದ್ದಿತು.
ಈ ವಾರ ಆರ್‌ಬಿಐ ಹಣಕಾಸು ನೀತಿ ಪರಾಮರ್ಶೆ ಮತ್ತು ಗುಜರಾತ್ ವಿಧಾನಸಭಾ ಚುನಾವಣೆಗಳು ನಡೆಯಲಿಕ್ಕಿರುವ ಕಾರಣ ಮುಂಬಯಿ ಶೇರು ವಹಿವಾಟು ಇಂದು ದಿನಪೂರ್ತಿ ತೀವ್ರವಾದ ಏರಿಳಿತಗಳನ್ನು ಕಂಡಿತು.
ಸೆನ್ಸೆಕ್ಸ್ ಕಳೆದ ನಾಲ್ಕು ದಿನಗಳ ನಿರಂತರ ಸೋಲಿನ ಹಾದಿಯಲ್ಲಿ 891.50 ಅಂಕಗಳ ನಷ್ಟವನ್ನು ಅನುಭವಿಸಿತ್ತು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಇಂದು 5.95 ಅಂಕಗಳ ನಷ್ಟದೊಂದಿಗೆ ದಿನದ ವಹಿವಾಟನ್ನು 10,127.75 ಅಂಕಗಳ ಮಟ್ಟದಲ್ಲಿ ಆಶಾದಾಯಕವಾಗಿ ಕೊನೆಗೊಳಿಸಿತು.