ಮುಂಬಯಿ : ತೈಲ ಮತ್ತು ಬ್ಯಾಂಕಿಂಗ್ ರಂಗದ ಶೇರುಗಳ ವ್ಯಾಪಕ ಖರೀದಿ ನಡೆದ ಕಾರಣ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ 130 ಅಂಕಗಳ ಮುನ್ನಡೆಯನ್ನು ಸಾಧಿಸಿತು.
ಇದೇ ವೇಳೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 9,900 ಅಂಕಗಳ ಮಟ್ಟವನ್ನು ಪುನರ್ ಸಂಪಾದಿಸಿತು.
ಇಂದು ನಡೆಯಲಿರುವ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ರಫ್ತುದಾರರು ಮತ್ತು ಸಣ್ಣ ಮತ್ತು ಮಧ್ಯಮ ಉದ್ಯಮಿಗಳಿಗೆ ಕೆಲವೊಂದು ರಿಯಾಯಿತಿಗಳನ್ನು ಕೊಡಲಾಗುವುದು ಎಂಬ ನಿರೀಕ್ಷೆಯಲ್ಲಿ ಶೇರು ಮಾರುಕಟ್ಟೆ ಇಂದು ಗರಿಗೆದರಿದೆ ಎಂದ ವಿಶ್ಲೇಷಕರು ಹೇಳಿದ್ದಾರೆ.
ಬೆಳಗ್ಗೆ 10.45ರ ಹೊತ್ತಿಗೆ ಸೆನ್ಸೆಕ್ಸ್ 187.62 ಅಂಕಗಳ ಏರಿಕೆಯೊಂದಿಗೆ 31,779.65 ಅಂಕಗಳ ಮಟ್ಟದಲ್ಲೂ, ನಿಫ್ಟಿ 69.70 ಅಂಕಗಳ ಏರಿಕೆಯೊಂದಿಗೆ 9,958.40 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಟಾಟಾ ಸ್ಟೀಲ್, ಗೇಲ್, ಹಿಂಡಾಲ್ಕೋ, ಎನ್‌ಟಿಪಿಸಿ, ವೇದಾಂತ ಶೇರುಗಳು ಇಂದು ಬೆಳಗ್ಗೆ ಅತೀ ಹೆಚ್ಚು ಕ್ರಿಯಾಶೀಲವಾಗಿ ಟಾಪ್ ಗೇನರ್ ಎನಿಸಿಕೊಂಡವು; ಟಾಪ್ ಲೂಸರ್‌ಗಳಾಗಿ ಎಚ್ ಡಿ ಎಫ್ ಸಿ, ಹೀರೋ ಮೋಟೋ ಕಾರ್ಪ್, ಯುಪಿಎಲ್, ಝೀ ಎಂಟರ್‌ಟೇನ್‌ಮೆಂಟ್, ಡಾ. ರೆಡ್ಡಿ ಶೇರುಗಳು ಹಿನ್ನಡೆಗೆ ಗುರಿಯಾದವು.