Advertisement

ಮುಂಬಯಿ ಶೇರು ಹೊಸ ಮೈಲುಗಲ್ಲು: 34,000 ಗಡಿ ದಾಟಿದ ಸೆನ್ಸೆಕ್ಸ್‌

10:47 AM Dec 26, 2017 | udayavani editorial |

ಮುಂಬಯಿ : ಮುಂಬಯಿ ಶೇರು ಪೇಟೆ ಇಂದು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ ಹೊಸ ಮೈಲುಗಲ್ಲನ್ನು ದಾಟಿದ ಸಾಧನೆಯನ್ನು ದಾಖಲಿಸಿತು. ಸೆನ್ಸೆಕ್ಸ್‌ ಸೂಚ್ಯಂಕ ಇದೇ ಮೊದಲ ಬಾರಿಗೆ 34,000 ಗಡಿಯನ್ನು ದಾಟಿತು; ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಹೊಸ ಎತ್ತರದ ದಾಖಲೆಯಾಗಿ 10,515 ಅಂಕಗಳ ಮಟ್ಟವನ್ನು ತಲುಪಿತು.

Advertisement

ಸೆನ್ಸೆಕ್ಸ್‌ ಇಂದು ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ 65.07 ಅಂಕಗಳ ಜಂಪ್‌ ದಾಖಲಿಸಿ 34,005.37 ಅಂಕಗಳ ಮಟ್ಟದ ಸಾರ್ವಕಾಲಿಕ ದಾಖಲೆಯ ಎತ್ತರವನ್ನು ತಲುಪಿತು. 

ಕಳೆದ ಶುಕ್ರವಾರ ಸೆನ್ಸೆಕ್ಸ್‌ 184.10 ಅಂಕಗಳ ಏರಿಕೆಯನ್ನು ದಾಖಲಿಸಿತ್ತು. ದೇಶೀಯ ಸಾಂಸ್ಥಿಕ ಹೂಡಿಕೆದಾರರು ಭರಾಟೆಯ ಶೇರು ಖರೀದಿಯಲ್ಲಿ ತೊಡಗಿ ಕೊಂಡದ್ದೇ ಇದಕ್ಕೆ ಕಾರಣವಾಗಿತ್ತು.

ಹಾಗಿದ್ದರೂ ಇಂದು ಬೆಳಗ್ಗೆ 10.40ರ ಹೊತ್ತಿಗೆ ಮುಂಬಯಿ ಶೇರು ಚಿತ್ರಣವೇ ಬದಲಾಯಿತು. ಸೆನ್ಸೆಕ್ಸ್‌ 16.04 ಅಂಕಗಳ ನಷ್ಟಕ್ಕೆ ಗುರಿಯಾಗಿ 33,924.26 ಅಂಕಗಳ ಮಟ್ಟಕ್ಕೆ ಇಳಿಯಿತು. ನಿಫ್ಟಿ 6.80 ಅಂಕಗಳ ನಷ್ಟಕ್ಕೆ ಗುರಿಯಾಗಿ 10,486.20 ಅಂಕಗಳ ಮಟ್ಟಕ್ಕೆ ಜಾರಿತು.

ಡಾಲರ್‌ ಎದುರು ರೂಪಾಯಿ ಇಂದು ಐದು ಪೈಸೆಯಷ್ಟು ಸುಧಾರಿಸಿ 64.02 ಮಟ್ಟಕ್ಕೆ ಏರಿತು.

Advertisement

ಮುಂಬಯಿ ಶೇರು ಪೇಟೆಯಲ್ಲಿಂದು ಮಾರುತಿ ಸುಜುಕಿ, ಇನ್‌ಫೋಸಿಸ್‌, ವೇದಾಂತ, ಒಎನ್‌ಜಿಸಿ ಮತ್ತು ಗೇಲ್‌ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು. 

Advertisement

Udayavani is now on Telegram. Click here to join our channel and stay updated with the latest news.

Next