Advertisement

Mudigere; ಭೀಕರ ಅಪಘಾತದಲ್ಲಿ ಓಮ್ನಿ ನಜ್ಜುಗುಜ್ಜು: ನಾಲ್ವರು ಮೃತ್ಯು

06:46 PM May 24, 2024 | Team Udayavani |

ಮೂಡಿಗೆರೆ (ಚಿಕ್ಕಮಗಳೂರು): ಬಣಕಲ್-ಕೊಟ್ಟಿಗೆಹಾರ ನಡುವೆ ಶುಕ್ರವಾರ ಮಧ್ಯಾಹ್ನ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ದಾರುಣವಾಗಿ ಸಾವನ್ನಪ್ಪಿದ್ದಾರೆ.

Advertisement

ಮೆಸ್ಕಾಂ ಲಾರಿ ಮತ್ತು ಓಮ್ನಿ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ್ದು, ಹಿಂಬದಿಯಲ್ಲಿದ್ದ ಆಲ್ಟೋ ಕೂಡ ಓಮ್ನಿ ಗೆ ಗುದ್ದಿ ಸರಣಿ ಅಪಘಾತ ನಡೆದಿದೆ.

ಓಮ್ನಿಯಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಓರ್ವ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯೆ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.

ಓಮ್ನಿ ಮತ್ತು ಆಲ್ಟೋ ಕಾರಿನಲ್ಲಿದ್ದವರು ಧರ್ಮಸ್ಥಳದಿಂದ ಚಿತ್ರದುರ್ಗಕ್ಕೆ ತೆರಳುತ್ತಿದ್ದರು, ಮೆಸ್ಕಾಂ ಲಾರಿ ಮೂಡಿಗೆರೆಯಿಂದ ಕೊಟ್ಟಿಗೆಹಾರಕ್ಕೆ ಹೋಗುತ್ತಿತ್ತು ಎಂದು ತಿಳಿದು ಬಂದಿದೆ.

ಮೃತ ದುರ್ದೈವಿಗಳನ್ನು ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಚಿಕ್ಕಜಾಜೂರು ಸಮೀಪದ ಚನ್ನಪಟ್ಟಣದ ಹಂಪಯ್ಯ(65),ಮಂಜಯ್ಯ (60),ಪ್ರೇಮ(58)ಹಾಗೂ ಪ್ರಭಾಕರ(45) ಎಂದು ಗುರುತಿಸಲಾಗಿದೆ. ಓಮ್ನಿ ಕಾರಲ್ಲಿ ಒಂಭತ್ತು ಮಂದಿ ಹಾಗೂ ಆಲ್ಟೋ ಕಾರಿನಲ್ಲಿ ಏಳು ಜನ ಪ್ರಯಾಣಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಆಲ್ಟೋ ಕಾರಿನಲ್ಲಿದ್ದು ಗಾಯಗೊಂಡವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.ಅಪಘಾತದಲ್ಲಿ ಒಟ್ಟು 12 ಮಂದಿ ಗಾಯ ಗೊಂಡಿದ್ದಾರೆ.ಮೃತ ದೇಹಗಳನ್ನು ಮೂಡಿಗೆರೆ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ.ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next