Advertisement

ಅವರಿಗೆ ಸಿಟ್ಟಿಲ್ಲ; ಚರ್ಚೆಗೆ ಪಟ್ಟು, ಉತ್ತರಕ್ಕೆ ಹಠ, ಅನುಷ್ಠಾನಕ್ಕಾಗಿ ಸಿಟ್ಟು

12:56 AM Feb 25, 2023 | Team Udayavani |

ಜಯಪ್ರಕಾಶ್‌ ಹೆಗ್ಡೆ,
ಅಧ್ಯಕ್ಷರು, ರಾಜ್ಯ ಹಿಂದುಳಿದ ವರ್ಗಗಳ ಆಯೋಗ
ಹಿರಿಯ ನಾಯಕ, ಮುತ್ಸದ್ದಿ ರಾಜಕಾರಣಿ ಯಡಿಯೂರಪ್ಪ ಅವರನ್ನು ಶಾಸಕ, ಪ್ರತಿಪಕ್ಷದ ನಾಯಕ, ಉಪ ಮುಖ್ಯಮಂತ್ರಿ ಹಾಗೂ ಮುಖ್ಯಮಂತ್ರಿಯಾಗಿ ಬಹಳ ಹತ್ತಿರದಿಂದ ನೋಡಿದ್ದೇನೆ. ಸದನದಲ್ಲಿ ಅವರು ನಿರ್ವಹಿಸಿದ ಎಲ್ಲಾ ಹುದ್ದೆಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಸ್ಪಷ್ಟ ಹಾಗೂ ದಿಟ್ಟ ನಿರ್ಧಾರ ತೆಗೆದುಕೊಳ್ಳುವಲ್ಲಿ ಅವರು ಯಾವತ್ತೂ ಹಿಂದೇಟು ಹಾಕುತ್ತಿರಲಿಲ್ಲ. ಕೈಗೊಂಡ ನಿರ್ಣಯಗಳು ಜಾರಿಯಾಗುವ ತನಕ ಅವರು ಬಿಡುತ್ತಿರಲಿಲ್ಲ. ಅವರೊಬ್ಬ “ಗುಡ್‌ ಲೀಡರ್‌’.

Advertisement

ಅಕ್ಷರಶಃ ಅತ್ಯುತ್ತಮ ಸಂಸದೀಯ ಪಟು, ಪ್ರತಿಯೊಂದು ವಿಷಯದ ಮೇಲೂ ಅವರಿಗೆ ಹೆಚ್ಚಿನ ಜ್ಞಾನ ಇರುತ್ತಿತ್ತು. ಒಂದು ವೇಳೆ ವಿಷಯ ಗೊತ್ತಿಲ್ಲದಿದ್ದರೆ ಮಾಹಿತಿ ಪಡೆದು ಮಾತನಾಡುವ ಧಾಟಿ ಎಲ್ಲರೂ ಮೆಚ್ಚತಕ್ಕದ್ದು, ಹೋಂ ವರ್ಕ್‌ ಇಲ್ಲದೇ ಯಾವತ್ತೂ ಅವರು ಸದನಕ್ಕೆ ಕಾಲಿಡುತ್ತಿರಲಿಲ್ಲ, ರಾಜಕೀಯ ವಿದ್ಯಮಾನಗಳು, ರಾಜ್ಯದ ವಿವಿಧೆಡೆ ಘಟಿಸಿದ ಘಟನೆಗಳಲ್ಲದೆ ಸದನದಲ್ಲಿ ಮಾತನಾಡಬಯಸಿದ್ದ ಮಾಹಿತಿಗಳ ಚೀಟಿಗಳು ಸದಾ ಅವರ ಜೇಬಿನಲ್ಲಿರುತ್ತಿದ್ದವು.

ವಿಪಕ್ಷದ ನಾಯಕರಾಗಿದ್ದಾಗ ಅವರು ಪ್ರಮುಖ ವಿಷಯಗಳ ಮೇಲೆ ಮಾತನಾಡಿ ಸರಕಾರದ ಗಮನ ಸೆಳೆದ ಬಳಿಕ ವಿಪಕ್ಷದ ಸಾಲಿನಲ್ಲಿ ಸ್ವಪಕ್ಷೀಯರಲ್ಲದೆ ಸಣ್ಣಪುಟ್ಟ ಪಕ್ಷಗಳು, ಪಕ್ಷೇತರ ಶಾಸಕರನ್ನು ಚರ್ಚೆಯಲ್ಲಿ ಭಾಗವಹಿಸು ವಂತೆ ಅವಕಾಶ ಮಾಡಿಕೊಡುತ್ತಿದ್ದರು, ಕೆಲವೊಮ್ಮೆ ಹುರಿ ದುಂಬಿಸುತ್ತಿದ್ದರು. ಹಲವು ಸಲ ಎಲ್ಲರನ್ನೂ ಕೂರಿಸಿಕೊಂಡು ಚರ್ಚಿಸಿ ಒಟ್ಟಾಗಿ ತೀರ್ಮಾನ ಕೈಗೊಳ್ಳುತ್ತಿದ್ದರು. ಸದನದಲ್ಲಿ ಚರ್ಚೆ ನಡೆಯುವಾಗ ಉಳಿದ ಸದಸ್ಯರು ಮಾತನಾಡುವಾಗ ಕೇಳಿಸಿಕೊಂಡು ಪಾಯಿಂಟ್‌ ಮಾಡಿಕೊಳ್ಳುತ್ತಿದ್ದರು. ಕಲಾಪದಲ್ಲಿ ಸಂಪೂರ್ಣವಾಗಿ ಭಾಗವಹಿಸುತ್ತಿದ್ದರು, ಅವರ ಗೈರು ಹಾಜರಿಯೇ ಅಪರೂಪ. ಬೆಳಿಗ್ಗೆಯಿಂದ ಸಂಜೆವರೆಗೂ ಕಲಾಪದಲ್ಲಿ ಸಕ್ರಿಯರಾಗಿ ಖುಷಿಯಿಂದ ಭಾಗವಹಿಸುವ ಮೂಲಕ ಇತರ ಶಾಸಕರಿಗೆ ಮಾದರಿಯಾಗಿರುತ್ತಿದ್ದರು, ಇಂಥವರು ಸದನದ ಒಳಗಡೆ ಇರಬೇಕಿತ್ತು.

ಸರಿಯೋ- ತಪೊ#à ನಿರ್ಣಯ ಕೈಗೊಂಡರೆ ಅದನ್ನು ಪ್ರಬಲವಾಗಿ ಸಮರ್ಥಿಸಿಕೊಳ್ಳುತ್ತಿದ್ದರು. ಇನ್ನು ಹಣಕಾಸು ಸಚಿವರಾಗಿ, ಡಿಸಿಎಂ, ಸಿಎಂ ಅಗಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡರೆ ಅವು ಅನುಷ್ಟಾನಗೊಳ್ಳುವ ತನಕ ಬಿಡುತ್ತಿರಲಿಲ್ಲ. ಜನಪರ ಯೋಜನೆಗಳು, ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ಯಾವತ್ತೂ ಅವರು ರಾಜೀ ಆಗುತ್ತಿರಲಿಲ್ಲ.

ಯಡಿಯೂರಪ್ಪ ಅವರಿಗೆ ಬಹಳ ಸಿಟ್ಟೆಂದು ಕೆಲವರು ಹೇಳುತ್ತಾರೆ, ಆದರೆ ನಾನು ಕಂಡಂತೆ ಅವರದು ಬಹಳ ಸೌಮ್ಯವಾದಿ. ಸಿಟ್ಟು ಇದೆ, ಆದರೆ ಅದು ವಿಷಯಾಧಾರಿತ ಸಿಟ್ಟು, ಚರ್ಚೆಗೆ ಪಟ್ಟು, ಉತ್ತರಕ್ಕೆ ಹಠ, ಅನುಷ್ಠಾನಕ್ಕಾಗಿ ಸಿಟ್ಟು ಇರುತ್ತಿತ್ತು, ಯಾವತ್ತೂ ಅವರು ವೈಯಕ್ತಿಕವಾಗಿ ಇನ್ನೊಬ್ಬರ ಮೇಲೆ ಸಿಟ್ಟು ಪ್ರಹಾರ ಮಾಡಿದ್ದು ನನಗಂತೂ ಗೊತ್ತಿಲ್ಲ. ವೈಯಕ್ತಿಕವಾಗಿ ನಿಂದನೆಯನ್ನು ಮಾಡುತ್ತಿರಲಿಲ್ಲ. ಆಡಳಿತ-ವಿಪಕ್ಷದ ಸದಸ್ಯರೆಲ್ಲರೂ ಅವರನ್ನು ಮೆಚ್ಚುತ್ತಾರೆ. ಎಲ್ಲರೊಂದಿಗೂ ಒಳ್ಳೆಯ ಸಂಬಂಧಬಿಟ್ಟುಕೊಂಡಿದ್ದಾರೆ.

Advertisement

ವಿಧಾನಸಭೆ, ವಿಧಾನ ಪರಿಷತ್‌ ಹೀಗೆ ಎರಡೂ ಸದನಗಳ ಅನುಭವವುಳ್ಳ ಯಡಿಯೂರಪ್ಪ ಅವರು ರಾಜ್ಯದ ಅಭಿವೃದ್ಧಿಗೆ ತಮ್ಮ ಕೊಡುಗೆ ನೀಡಿದ್ಧಾರೆ. ಇಂಥವರು ಸದನದ ಒಳಗಡೆ ಇರಬೇಕಿತ್ತು, ಹಿರಿಯ ತಲೆಗಳು ಸದನದೊಳಗಡೆ ಇದ್ದರೆ ನಿಜಕ್ಕೂ ಸದನಕ್ಕೊಂದು ಗೌರವ.

Advertisement

Udayavani is now on Telegram. Click here to join our channel and stay updated with the latest news.

Next