Advertisement

ಕರ್ನಾಟಕದ ಒಂದಿಂಚು ಭೂಮಿಯನ್ನು ಬಿಟ್ಟು ಕೊಡೆವು : ಉದ್ಧವ್ ಠಾಕ್ರೆ ಹೇಳಿಕೆಗೆ BSY ಖಂಡನೆ

05:22 PM Jan 18, 2021 | Team Udayavani |

ಉಡುಪಿ : ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿಕೆ ಉದ್ಧಟತನದಿಂದ ಕೂಡಿರುವಂತದ್ದು ಅಲ್ಲದೆ ಭಾರತೀಯ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದ ನಿಲುವು ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

Advertisement

ಕಾರ್ಯಕ್ರಮ ನಿಮಿತ್ತ ಉಡುಪಿಗೆ ಆಗಮಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕರ್ನಾಟಕ ಗಡಿ ಭಾಗದ ಕುರಿತು ಮಹಾರಾಷ್ಟ್ರ ಮುಖ್ಯಮಂತ್ರಿ ನೀಡಿರುವ ಹೇಳಿಕೆಯನ್ನು ಖಂಡಿಸುತ್ತೇನೆ ಅಲ್ಲದೆ ಗಡಿ ಭಾಗದ ಒಂದಿಂಚು ಜಾಗವನ್ನು ಬಿಟ್ಟು ಕೊಡುವ ಪ್ರಮೇಯ ಉದ್ಭವಿಸುವುದಿಲ್ಲ ಕರ್ನಾಟಕದಲ್ಲಿ ಕನ್ನಡಿಗರು ಮರಾಠಿಗರು ಒಂದೇ ತಾಯಿ ಮಕ್ಕಳಂತೆ ಬಾಳಿ ಬದುಕುತ್ತಿದ್ದಾರೆ ಈ ಸೌಹಾರ್ದಯುತ ವಾತಾವರಣವನ್ನು ಕೆಡಿಸುವಂತ ಕೆಲಸ ಮಹಾರಾಷ್ಟ್ರ ಮುಖ್ಯಮಂತ್ರಿ ಮಾಡುತ್ತಿದ್ದು ಇದು ಅವರಿಗೆ ಗೌರವ ತರುವಂತದಲ್ಲ ಇದನ್ನು ಖಂಡಿಸುತ್ತೇನೆ ಯಾವುದೇ ಕಾರಣಕ್ಕೂ ನಮ್ಮ ಭಾಗದ ಒಂದಿಂಚು ಭೂಮಿಯನ್ನು ಕೊಡುವ ಪ್ರಶ್ನೆ ಉದ್ಭವ ಆಗುವುದಿಲ್ಲ ಇನ್ನಾದರೂ ಈ ವಿಚಾರದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿಗಳು ರಾಜಕಾರಣ ಮಾಡುವುದನ್ನು ನಿಲ್ಲಿಸಲಿ ಎಂದರು.

ಇದನ್ನೂ ಓದಿ:ಇಫಿ 2021 ಸ್ಪೆಷಲ್: ಹೊಸ ಬಗೆಯ ಚಿತ್ರೋತ್ಸವ: ಚಪ್ಪಾಳೆ‌ ತಟ್ಟಬೇಕೋ, ಬೇಡವೋ?

ಈ ರೀತಿಯ ಹೇಳಿಕೆಗಳು ಕನ್ನಡ ಪರ ಸಂಘಟನೆ ಮಾತ್ರವಲ್ಲ ಯಾವುದೇ ಸಂಘಟನೆಯವರಿಗೂ ನೋವು ತರುವಂತಹದು ದಯವಿಟ್ಟು ಕನ್ನಡ ಪರ ಸಂಘಟನೆಗಳು ಈ ರೀತಿಯ ರಾಜಕೀಯ ಹೇಳಿಕೆಗಳಿಗೆ ತಲೆಕೆಡಿಸ್ಕೊಳ್ಳಬೇಡಿ ಎಂದು ಮುಖ್ಯಮಂತ್ರಿಗಳು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next