Advertisement
ಈಗ ರಾಜ್ಯ ಬಿಜೆಪಿಯಲ್ಲಿ ಪಿತೃ ಸ್ಥಾನ ದಲ್ಲಿರುವ ಯಡಿಯೂರಪ್ಪ ಹರಿಸಿದ ಕಣ್ಣೀರು ರಾಜ್ಯ ರಾಜಕಾರಣ ದಲ್ಲಿ ಅಪಾರ್ಥ ಸಂದೇಶ ರವಾ ನಿಸುವ ಸಾಧ್ಯತೆ ದಟ್ಟವಾಗಿತ್ತು. ಪಕ್ಷದ ಕಾರ್ಯಕರ್ತರಲ್ಲಿ, ಅವರ ಹಿಂದೆ ಇರುವ ಪ್ರಬಲ ಲಿಂಗಾ ಯತ ಸಮುದಾಯದಲ್ಲಿ ಹರಡ ಬಹುದಾಗಿದ್ದ ಋಣಾತ್ಮಕತೆ. ಅವು ಗಳೆಲ್ಲಕ್ಕಿಂತ ಹೆಚ್ಚಾಗಿ ಯಡಿಯೂರಪ್ಪ ಸ್ಥಿತ್ಯಂತರವನ್ನು ಕಾಂಗ್ರೆಸ್ ಬಳಸಿ ಕೊಳ್ಳುವ ಸಾಧ್ಯತೆ ಬಹುತೇಕ ಹೆಚ್ಚಿತ್ತು. ಜತೆಗೆ, ಮುಂದಿನ ವಿಧಾನಸಭೆ ಚುನಾವಣೆ ಮಾತ್ರವಲ್ಲದೆ ಲೋಕಸಭೆ ಚುನಾವಣೆಯನ್ನೂ ಎದುರಿಸ ಬೇಕಾದಾಗ ಯಡಿಯೂರಪ್ಪ ಅವರ ಅಗತ್ಯತೆ ಇವೆಲ್ಲವನ್ನೂ ಮನಗಂಡ ಬಿಜೆಪಿ ವರಿಷ್ಠರು ಯಡಿಯೂರಪ್ಪ ಅವರಿಗೆ ಮನ್ನಣೆ ನೀಡಿರುವುದು ವೇದ್ಯವಾಗುತ್ತದೆ. ಜತೆಗೆ, ಯಡಿ ಯೂರಪ್ಪ ಅವರ ಅಧಿಕಾರ ತ್ಯಾಗದ ಸಂದರ್ಭದ ಭಾವುಕ ಕಣ್ಣೀರನ್ನು ಒರೆಸುವ ಉದ್ದೇಶವೂ ವರಿಷ್ಠರಿಗೆ ಇರುವಂತಿದೆ.
Related Articles
Advertisement
ಅವರ ರಾಜಕೀಯ ಅನುಭವದ ಅಗಾಧತೆ ಮುಂದೆ ಚಿಕ್ಕವರಾಗಿದ್ದರೂ, ವಿರುದ್ಧ ಮಾತನಾಡಿದ ಕೆಲ ನಾಯಕರಿಗೆ ಮಾತಿನೇಟು ನೀಡದೆ, ರಾಜಕೀಯ ಪೆಟ್ಟಿನ ಮೂಲಕ ಆಘಾತ ನೀಡಿರುವುದನ್ನು ಗಮನಿಸಬೇಕಿದೆ.
ಆದರೆ ಪಕ್ಷದ ಕೇಂದ್ರ ನಾಯ ಕರೂ ಮುಂದಿನ ರಾಜಕೀಯ ನಡಾವಳಿಗಳನ್ನು ಖಂಡಿತ ಹತ್ತಿರ ದಿಂದ ನೋಡಲಿದ್ದಾರೆ. ನೂತನ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ತಮ್ಮ ಪಕ್ಷದ ನಿಲುವಿಗೆ ತಕ್ಕಂತೆ ರೂಪಿಸುವ ಸಾಧ್ಯತೆ ಹೆಚ್ಚಿದೆ. ಜನತಾ ಪರಿವಾರ ದಿಂದ ಬಂದ ಬೊಮ್ಮಾಯಿ, ಸಮಾಜವಾದಿ ನಾಯಕರ ಗರಡಿ ಯಲ್ಲಿ ಪಳಗಿದವರು. ಈಗ ಬಿಜೆಪಿ ಮುಖ್ಯಮಂತ್ರಿಯಾಗಿರುವ ಅವರನ್ನು ತನ್ನ ಪಕ್ಷದ ಚೌಕಟ್ಟಿನಲ್ಲಿ ಹೇಗೆ ತನ್ನ ಮುಂದಿನ ನಾಯಕನಾಗಿ ರೂಪಿಸುತ್ತದೆ ಮತ್ತು ಪಕ್ಷವನ್ನು ಮತ್ತೆ ಅಧಿಕಾರಕ್ಕೆ ಬರುವಂತೆ ಹೇಗೆ ನೋಡಿಕೊಳ್ಳುತ್ತಾರೆ ಎನ್ನುವುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.
-ನವೀನ್ ಅಮ್ಮೆಂಬಳ