Advertisement
“ಬಿ.ಎಸ್. ಯಡಿಯೂರಪ್ಪ ಮತ್ತು ನನ್ನ ಸಂಬಂಧ ಬಹಳ ಹಳೆಯದು. ಅವರು ಶಿಕಾರಿಪುರಕ್ಕೆ ಬಂದು ನೆಲೆಸಿದ ನಂತರದಿಂದ ಅವರ ಮತ್ತು ನನ್ನ ಒಡನಾಟ ಆರಂಭವಾ ಯಿತು. ನಾವಿಬ್ಬರು ಸಂಘಪರಿವಾರದ ಸಿದ್ಧಾಂತಕ್ಕೆ ಆಕ ರ್ಷಿತರಾಗಿ ಸ್ವಯಂಸೇವಕರಾಗಿ ದುಡಿದವರು. ಜನಸಂಘ ಪಾರ್ಟಿ ಸ್ಥಾಪನೆಯಾದ ನಂತರ ಅದರ ಧ್ವಜವನ್ನು ಹಿಡಿದು, ರೈತರು, ಕೂಲಿಕಾರ್ಮಿಕರು, ಜೀತದಾಳುಗಳು, ಬಡವರು. ದಲಿತರು ಸಮಸ್ಯೆಗಳಿಗೆ ಹೋರಾಟ ಮಾಡಿ ಅದಕ್ಕೆ ಪರಿಹಾರ ದೊರಕಿಸಿಕೊಡುವ ಪ್ರಯತ್ನ ಮಾಡುತ್ತಿದ್ದೆವು.
Related Articles
Advertisement
ಯಡಿಯೂರಪ್ಪನವರು ಮುಖ್ಯಮಂತ್ರಿಯಾದರು. ನಾನು ಅವರ ಮಂತ್ರಿಮಂಡಳದಲ್ಲಿ ಸಚಿವನಾಗಿ ಕೆಲಸ ಮಾಡಿದೆ. ಮೊದಲ ಬಾರಿಗೆ ಮುಖ್ಯಮಂತ್ರಿ ಆದಾಗ ಅನೇಕ ಉತ್ತಮ ಕೆಲಸಗಳನ್ನು ಮಾಡಿದರು. ಗೋಹತ್ಯೆ ನಿಷೇಧ ಕಾಯ್ದೆ, ಪ್ರೌಢಶಾಲಾ ಮಕ್ಕಳಿಗೆ ಬೈಸಿಕಲ್, ಭಾಗ್ಯಲಕ್ಷ್ಮೀ ಯೋಜನೆ ಇತ್ಯಾದಿ ಜಾರಿಗೆ ತಂದರು. ದೇಶದಲ್ಲೇ ಮೊದಲ ಬಾರಿಗೆ ಕೃಷಿ ಬಜೆಟ್ ಮಂಡನೆ ಮಾಡಿದರು.
ಎರಡನೇ ಬಾರಿಗೆ ಮುಖ್ಯಮಂತ್ರಿ ಆದಾಗ ಆರಂಭದಲ್ಲೇ ಪ್ರವಾಹ ಬಂತು, ನಂತರ ಕೊರೊನಾ ಮೊದಲ ಮತ್ತು 2ನೇ ಅಲೆ, ಈಗ ಮತ್ತೆ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಈ ಸವಾಲುಗಳನ್ನು ಸಮರ್ಥವಾಗಿ ಅವರು ಎದುರಿಸಿದ್ದಾರೆ. ಆರಂಭದಲ್ಲಿ ಪ್ರವಾಹ ಬಂದಾಗ ಒಬ್ಬರೇ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡಿದರು. ರಾಷ್ಟ್ರೀಯ ಶಿಕ್ಷಣ ನೀತಿ ರಾಜ್ಯದಲ್ಲಿ ಜಾರಿಗೆ ಕ್ರಮ ಕೈಗೊಂಡರು. 3.5 ಕೋಟಿ ಜನರಿಗೆ ವ್ಯಾಕ್ಸಿನ್ ಹಾಕಿರುವುದು ಬಹುದೊಡ್ಡ ಸಾಧನೆ.
ಅವರ ವಿದಾಯ ಭಾಷಣದಲ್ಲಿ ಕಣ್ಣೀರು ಹಾಕಿದ್ದು ಅದು ದುಖ:ದಿಂದ ಅಲ್ಲ. ಸಮಾಧಾನದಿಂದ ಬಂದ ಕಣ್ಣೀರು. ಪಕ್ಷದ ನೀತಿಯಂತೆ ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ್ ಜೋಷಿ, ಕಲ್ಯಾಣ್‌ಸಿಂಗ್ ಮತ್ತಿತರರು ಅಧಿಕಾರ ಬಿಟ್ಟುಕೊಟ್ಟಿದ್ದಾರೆ. ನನಗೂ 78 ವರ್ಷ ವಯಸ್ಸಾಗಿದೆ, ಪಕ್ಷ ಹೇಳುವುದಕ್ಕಿಂತ ಮೊದಲೇ ಚುನಾವಣೆಗೆ ಸ್ಪರ್ಧಿಸಲ್ಲ ಎಂದು ನಾನೇ ಹೇಳಿಬಿಟ್ಟೆ. ಅದೇ ರೀತಿ ಯಡಿಯೂರಪ್ಪನವರು ಅಧಿಕಾರ ಬಿಟ್ಟುಕೊಟ್ಟಿದ್ದಾರೆ. ಭಾವೋದ್ವೇಗ ಸಹಜ. ಆದರೆ, ಧನ್ಯತೆಯಿಂದ ಬಂದ ಕಣ್ಣೀರು. ಅದು ಸಿಟ್ಟೂ ಅಲ್ಲ, ನೋವು ಅಲ್ಲ. ಸಮಾಧಾನ ಮತ್ತು ಸಾಮಾನಚಿತ್ತದಿಂದ ವಿದಾಯ ಹೇಳಿ, ಮುಂದಿನ 10-15 ವರ್ಷ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ…..”ಶಹಬ್ಟಾಸ್ ಯಡಿಯೂರಪ್ಪ’
ಡಿ.ಎಚ್. ಶಂಕರಮೂರ್ತಿ,
ವಿಧಾನಪರಿಷತ್ ಮಾಜಿ ಸಭಾಪತಿ