Advertisement

ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿಸಿದರೆ ಬಿಜೆಪಿಗೆ ಪಾಠ : ಮುರುಘಾಮಠ ಶ್ರೀ

07:35 PM Jul 20, 2021 | Team Udayavani |

ಧಾರವಾಡ : ರಾಜ್ಯದ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಬದಲಿಸಿದರೆ ಅದರ ಪರಿಣಾಮವನ್ನು ಬಿಜೆಪಿ ಮುಂದಿನ ದಿನಗಳಲ್ಲಿ ಎದುರಿಸಬೇಕಾದಿತು ಎಂದು ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ನಗರದ ಎಪಿಎಂಸಿ ದಲಾಲ್ ಮತ್ತು ವರ್ತಕರ ಸಂಘದ ಸಭಾಂಗಣದಲ್ಲಿ ನಡೆದ ಸಭೆಯ ಸಾನಿಧ್ಯವಹಿಸಿ, ಶ್ರೀಗಳು ಮಾತನಾಡಿದರು.

Advertisement

ನಾಡಿನ ಸುತ್ತೂರು ಮಠ, ಕಲಬುರಗಿಯ ಸಾರಂಗಿ ಮಠ ಸೇರಿದಂತೆ ಹಲವು ಮಠಾಧಿಶರು ಮತ್ತು ವಿಶೇಷವಾಗಿ ಎಲ್ಲಾ ಪಕ್ಷಗಳ ಲಿಂಗಾಯತ ನಾಯಕರು ಪಕ್ಷಾತೀತವಾಗಿ ಈಗಾಗಲೇ ಸಿಎಂ ಯಡಿಯೂರಪ್ಪ ಅವರನ್ನು ಅವಧಿ ಮುಗಿಯುವರೆಗೆ ಸಿಎಂ ಸ್ಥಾನದಲ್ಲಿ ಮುಂದುವರೆಸಬೇಕು ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಹೀಗಾಗಿ ಬಿಜೆಪಿ ಹೈಕಮಾಂಡ್ ಅವರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯ ಶಿವಶಂಕರ ಹಂಪಣ್ಣವರ ಮಾತನಾಡಿ, ಲಿಂಗಾಯತ ಸಮಾಜವು ಸೇರಿದಂತೆ ಎಲ್ಲಾ ಸಮಾಜದ ಜೊತೆಗೆ ಕಳೆದ ಹಲವು ದಶಕಗಳಿಂದ ಉತ್ತಮ ಒಡನಾಟ ಹಾಗೂ ಬಾಂಧವ್ಯ ಹೊಂದಿರುವ ಬಿ.ಎಸ್. ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗೆ ಇಳಿಸಿದರೆ ಬಿಜೆಪಿಯನ್ನು ಲಿಂಗಾಯತ ಸಮಾಜ ಯಾವತ್ತೂ ಕ್ಷಮಿಸಲ್ಲ ಎಂಬುದನ್ನು ಮರೆಯಬಾರದು ಎಂದು ಎಚ್ಚರಿಸಿದರು.

ಇದನ್ನೂ ಓದಿ :ಬಕ್ರೀದ್‌ ಗಾಗಿ ನಿಯಮ ಸಡಿಲಿಕೆ : ಕೇರಳ ಸರ್ಕಾರದ ವಿರುದ್ಧ ಸುಪ್ರೀಂ ಕಿಡಿ

ಲಿಂಗಾಯತ ಸಮಾಜದ ನಾಯಕರನ್ನು ಈ ಹಿಂದಿನಿಂದಲೂ ಎಲ್ಲಾ ಪಕ್ಷದ ನಾಯಕರು ತುಳಿಯುತ್ತಾ ಬಂದಿದ್ದಾರೆ. ಈಗ ಸಿಎಂ ಬದಲಿಸಿದರೆ ಇದು ಇಡೀ ಲಿಂಗಾಯತ ಸಮಾಜಕ್ಕೆ ಅಪಮಾನ ಮಾಡಿದಂತಾಗುತ್ತದೆ. ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶ್ಯಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಂ.ಬಿ. ಪಾಟೀಲ ಅವರು ಈಗಾಗಲೇ ಈ ಕುರಿತು ನಿಲುವು ತಿಳಿಸಿದ್ದಾರೆ. ಈಗಾಗಲೇ ವಿವಿಧ ಸಮಾಜದ ಮಠಾಽಶರು ಯಡಿಯೂರಪ್ಪ ಅವರಿಗೆ ಬಹಿರಂಗವಾಗಿ ಬೆಂಬಲ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಲಿಂಗಾಯತ ಸಮಾಜದ ಪ್ರಶ್ನಾತೀತ ನಾಯಕರು ಆಗಿರುವ ಯಡಿಯೂರಪ್ಪ ಅವರನ್ನೇ ಮುಂದಿನ ಎರಡು ವರ್ಷ ಮುಂದಿವರೆಸಬೇಕು ಎಂದುಆಗ್ರಹಿಸಿದರು.

Advertisement

ಈ ಸಂದರ್ಭದಲ್ಲಿ ಬಸವರಾಜ ದಿಗ್ಗಿ, ಶಂಕರ ಬೆಂಡಿಗೇರಿ, ಬಸವರಾಜ ಸುರೇಬಾನ, ಸಂಗನಗೌಡರ ಖಾನಗೌಡರ, ಅಶೋಕ ಸಂಗೋಳ್ಳಿ, ಗುರು ವಾಲಿ, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಕಮಿಟಿ ಸದಸ್ಯ ನೀಲಕಂಠ ಹಂಪಣ್ಣವರ, ಯಲ್ಲಪ್ಪ ಮುಂದಿನಮನಿ, ತಮ್ಮಣ್ಣ ಯಂಡಿಗೇರಿ, ಮಲ್ಲನಗೌಡರ ಚಿಕ್ಕನಗೌಡರ, ಪ್ರದೀಪ ಪಾಟೀಲ ಸೇರಿದಂತೆ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next