Advertisement

ಬಿಎಸ್‌ವೈ ಮತ್ತೆ ಸಿಎಂ ಕನಸು ನನಸಾಗದು

01:17 PM Feb 28, 2017 | Team Udayavani |

ದಾವಣಗೆರೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪನವರಿಗೆ 75 ವರ್ಷ ತುಂಬಿದ ನಂತರ ಮತ್ತೆ ಮುಖ್ಯಮಂತ್ರಿಯಾಗುವ ಅವಕಾಶವೇ ಸಿಗುವುದಿಲ್ಲ ಎಂಬ ಕಾರಣಕ್ಕೆ ಅವರು ಈಗಲೇ ವಿಧಾನ ಸಭಾ ವಿಸರ್ಜನೆಗೆ ಒತ್ತಾಯಿಸುತ್ತಿದ್ದಾರೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಲೇವಡಿ ಮಾಡಿದ್ದಾರೆ.

Advertisement

ಸೋಮವಾರ ರೇಣುಕಾ ಮಂದಿರದಲ್ಲಿ ಕಾಂಗ್ರೆಸ್‌ ಪಕ್ಷ ಏರ್ಪಡಿಸಿದ್ದ ಜನ ವೇದನ ಸಮಾವೇಶದಲ್ಲಿ ಮಾತನಾಡಿದ ಅವರು, ಹೇಗಾದರೂ ಸರಿ ಮತ್ತೆ ಮುಖ್ಯಮಂತ್ರಿ ಆಗಲು ತುಂಬಾ ಅವಸರದಲ್ಲಿರುವ ಯಡಿಯೂರಪ್ಪರಿಗೆ 2018ಕ್ಕೆ 75 ವರ್ಷವಾಗಲಿದೆ. ಅವರ ಪಕ್ಷದ ನೀತಿ ಪ್ರಕಾರ 75 ವರ್ಷವಾದವರಿಗೆ ಅಧಿಕಾರ ಕೊಡುವಂತಿಲ್ಲ.

ಹಾಗಾಗಿಯೇ ಅವರು ಬೋಗಸ್‌ ಡೈರಿ ವಿಷಯ ಮುಂದಿಟ್ಟುಕೊಂಡು ವಿಧಾನ ಸಭಾ ವಿಸರ್ಜನೆಗೆ ಒತ್ತಾಯಿಸುತ್ತಿದ್ದಾರೆ ಎಂದರು. ಮಾಜಿ ಮುಖ್ಯಮಂತ್ರಿ, ಹಿರಿಯ ಮುತ್ಸದ್ದಿ ಯಡಿಯೂರಪ್ಪನವರು ಬೋಗಸ್‌ ಡೈರಿ ಮುಂದಿಟ್ಟುಕೊಂಡು ಜನರು, ಸರ್ಕಾರವನ್ನು ದಿಕ್ಕು ತಪ್ಪಿಸುವಂತಹ ಕೆಲಸ ಮಾಡುತ್ತಿದ್ದಾರೆ. ಅವರ ಬಗ್ಗೆ ಅಪಾರ ಗೌರವ ಇದೆ. 

ನಿಜಕ್ಕೂ ಅವರಲ್ಲಿ ದಾಖಲೆ ಇದ್ದಲ್ಲಿ ಸಿಬಿಐ ಒಳಗೊಂಡಂತೆ ಯಾವುದೇ ತನಿಖೆಗೆ ಒಳಪಡಿಸಲಿ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ. ಅದಕ್ಕೆ ಯಾರೂ ಬೇಡ ಎನ್ನುವುದೇ ಇಲ್ಲ. ಅದನ್ನು ಬಿಟ್ಟು ಇಂತಹ ಬೇಜಾವಾಬ್ದಾರಿ ಹೇಳಿಕೆ ನೀಡುವುದು, ಸುಳ್ಳು ಹೇಳುವುದು ಪ್ರಜಾಪ್ರಭುತ್ವಕ್ಕೆನೇ ಅವಮಾನ ಮಾಡುವ ವಿಷಯ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. 

ನ.8 ರಂದು ಏಕಾಏಕಿ ನೋಟು ಅಮಾನ್ಯ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅನಾವಶ್ಯಕವಾಗಿ ದೇಶದ ಆರ್ಥಿಕ ಹಿನ್ನಡೆ, ಅರಾಜಕತೆಗೆ ಕಾರಣವಾಗಿದ್ದಾರೆ. ನೋಟು ಅಮಾನ್ಯದಿಂದ ದೇಶದ ಬ್ಯಾಂಕ್‌ ಗಳಲ್ಲಿ 6.70 ಲಕ್ಷ ಕೋಟಿ ಅನುತ್ಪಾದಕ ಸಾಲ ಇದೆ. ಮಾರ್ಚ್‌ ನಂತರ ವಹಿವಾಟು ಇಲ್ಲದೆ ಅನೇಕ ಕಂಪನಿಗಳು ದಿವಾಳಿಯಾಗಲಿವೆ.

Advertisement

ಇನ್ನು ಪ್ರಧಾನಿ ಮಾಡುತ್ತಿರುವಂತಹ ಪ್ರಚೋದನಾತ್ಮಕ ಭಾಷಣ ಕೇಳಿದರೆ ದೇಶ ಎಲ್ಲಿಗೆ ಹೋಗಿ ನಿಲ್ಲುತ್ತದೆ  ಎಂಬ ಭಯ ಕಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ನಾನು ಮುಖ್ಯಮಂತ್ರಿಯಾದ 24 ಗಂಟೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಜೈಲಿಗೆ ಕಳಿಸುವುದಾಗಿ ಯಡಿಯೂರಪ್ಪ ಹೇಳುತ್ತಿದ್ದಾರೆ. 

ಆದರೆ, ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಎರಡು ಗಂಟೆಯಲ್ಲೇ ಅನ್ನಭಾಗ್ಯ ಯೋಜನೆ ಘೋಷಿಸಿ, ಸಾಲ ಮನ್ನಾ ಮಾಡಿದರು. 4 ವರ್ಷದಲ್ಲಿ ನೀರಾವರಿಗೆ 42 ಸಾವಿರ ಕೋಟಿ, 1 ಕೋಟಿ ಮಕ್ಕಳಿಗೆ ವಾರದಲ್ಲಿ ಮೂರು ದಿನ ಹಾಲು ಕೊಡುವ ಕೀÒರಭಾಗ್ಯ, 10 ಲಕ್ಷ ಮನೆ ನಿರ್ಮಾಣ, 17 ಸಾವಿರ ಕಿಲೋ ಮೀಟರ್‌ ಜಿಲ್ಲಾ, 6 ಸಾವಿರ ಕಿಲೋ ಮೀಟರ್‌ ಜಿಲ್ಲಾ ಹೆದ್ದಾರಿ ನಿರ್ಮಿಸಿದ್ದಾರೆ.

ಬರದ ಹಿನ್ನೆಲೆಯಲ್ಲಿ ಕುಡಿಯುವ ನೀರು, ಮೇವು, ಉದ್ಯೋಗಕ್ಕಾಗಿ 1,200 ಕೋಟಿ ನೀಡಿದ್ದಾರೆ. ಕಾಂಗ್ರೆಸ್‌ನದು ಅಭಿವೃದ್ಧಿವಾದ, ಬಿಜೆಪಿಯವರದು ಕೋಮುವಾದ. ಮುಂದೆಯೂ ಕಾಂಗ್ರೆಸ್‌ ಅಧಿಕಾರಕ್ಕೆ ಬಂದೇ ಬರುತ್ತದೆ. ಎಲ್ಲರೂ ಒಗ್ಗೂಡಿ ಪಕ್ಷ ಸಂಘಟಿಸಿ, ಮತ್ತೆ ಅಧಿಕಾರಕ್ಕೆ ಬರುವಂತಾಗಬೇಕು ಎಂದು ತಿಳಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next