Advertisement

ಏ.1ರಿಂದ ಬಿಎಸ್‌-6 ಪೆಟ್ರೋಲ್‌, ಡೀಸೆಲ್‌ ದರ 1ರೂ. ಏರಿಕೆ?

10:00 AM Jan 31, 2020 | Sriram |

ನವದೆಹಲಿ: ಏ.1ರಿಂದ ದೇಶಾದ್ಯಂತ ಭಾರತ್‌ ಸ್ಟೇಜ್‌ -6 (ಬಿಎಸ್‌06) ಪರಿಸರ ಮಾಲಿನ್ಯ ನಿಯಂತ್ರಣ ವ್ಯವಸ್ಥೆ ಜಾರಿ ಬರಲಿದೆ. ಅದಕ್ಕೆ ಪೂರಕವಾಗಿ ಪೆಟ್ರೋಲ್‌, ಡೀಸೆಲ್‌ ದರ ಪ್ರತಿ ಲೀಟರ್‌ಗೆ 50 ಪೈಸೆಯಿಂದ 1 ರೂ. ವರೆಗೆ ಏರಿಕೆಯಾಗಲಿದೆ.

Advertisement

ಸದ್ಯ ದೇಶದಲ್ಲಿ ಐರೋಪ್ಯ ರಾಷ್ಟ್ರಗಳಲ್ಲಿರುವ ಯೂರೋ-4 ಮಾದರಿಯಂತೆ ಬಿಎಸ್‌-4 ಮಾದರಿಯ ಇಂಧನಗಳನ್ನು ಪೂರೈಸಲಾಗುತ್ತಿದೆ.

ಸುಪ್ರೀಂಕೋರ್ಟ್‌ ನಿರ್ದೇಶನದ ಹಿನ್ನೆಲೆಯಲ್ಲಿ ಏ.1ರಿಂದ ಬಿಎಸ್‌-6 ನಿಯಮಗಳಿಗೆ ಅನ್ವಯವಾಗುವಂತೆ ಪೆಟ್ರೋಲ್‌, ಡೀಸೆಲ್‌ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ. ಸದ್ಯ ದೇಶದ ಆಯ್ದ ನಗರಗಳಲ್ಲಿ ಮಾತ್ರ ಬಿಎಸ್‌-6 ಇಂಧನ ದೊರೆಯುತ್ತಿದೆ. ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ ಅಧ್ಯಕ್ಷ ಸಂಜೀವ್‌ ಸಿಂಗ್‌ ಮಾತನಾಡಿ, ಕಂಪನಿಯ ರಿಫೈನರಿಗಳಲ್ಲಿ ಈಗಾಗಲೇ ಬಿಎಸ್‌-6 ನಿಯಮಗಳಿಗೆ ಅನ್ವಯವಾಗುವಂತೆ ಪೆಟ್ರೋಲ್‌, ಡೀಸೆಲ್‌ ಉತ್ಪಾದಿಸಲಾಗುತ್ತದೆ. ಇದರಿಂದಾಗಿ ತೈಲ ಕಂಪನಿಗಳು ರಿಫೈನರಿಗಳ ಮೇಲ್ದರ್ಜೆಗಾಗಿ ಮಾಡಿದ ಹೂಡಿಕೆ ವಾಪಸ್‌ ಪಡೆವ ನಿಟ್ಟಿನಲ್ಲಿ ದರ ಏರಿಕೆ ಅನಿವಾರ್ಯವಾಗಲಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next