Advertisement
ಪುತ್ತಿಗೆ ಗ್ರಾಮ ಪಂಚಾಯತ್‌ಗೆ ಒಳಪಟ್ಟ ಕಾಮನಬೈಲು. ಮಧುವಾಹಿನಿ ಹೊಳೆಯ ನಿರಂತರವಾದ ಹರಿವು, ಕಾಮನಬೈಲು ಹೊಳೆಯ ಸೌಂದರ್ಯ, ಅಡಿಕೆ-ತೆಂಗಿನ ತೋಟ, ವಿಶಾಲವಾದ ಭತ್ತದ ಗದ್ದೆಗಳು, ವಿವಿಧ ತರಕಾರಿ ಕೃಷಿ, ಮುರಕಲ್ಲಿನ ಪಾರೆ ಪ್ರದೇಶ ಹಾಗೂ ಕಿರು ಅರಣ್ಯ ಪ್ರದೇಶವನ್ನೊಳಗೊಂಡು ಜೈವ ವೈವಿಧ್ಯತೆಯ ತಾಣವಾಗಿರುವುದು ಧಾರಾಳ ಪಕ್ಷಿಗಳು ಕಂಡು ಬರಲು ಕಾರಣವಾಗಿದೆ.
ಹೈಸ್ಕೂಲ್ ವಿದ್ಯಾರ್ಥಿಗಳಾದ ಸಹೋದರ ರಾದ ರಾಕೇಶ್ ನೀರ್ಚಾಲ್ ಕುಂಬಳೆ ಹೋಲಿ ಫ್ಯಾಮಿಲಿ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಯಾದರೆ ತಮ್ಮ ರೋಹನ್ ಅದೇ ಶಾಲೆಯ ಒಂಬತ್ತನೇ ತರಗತಿಯಲ್ಲಿ ಕಲಿಯುತ್ತಿದ್ದಾನೆ. ಕುಂಬಳೆ ಹೋಲಿ ಫ್ಯಾಮಿಲಿ ಶಾಲೆ ಪಕ್ಷಿಪ್ರೇಮಿ ಅಧ್ಯಾಪಕ ರಾಜು ಕಿದೂರು ಅವರೊಂದಿಗಿನ ಒಡನಾಟದಿಂದ ಪಕ್ಷಿ ನಿರೀಕ್ಷಣೆ ಆರಂಭಿಸಿದ ಇವರು ಇಂದು ಉತ್ತಮ ವಿದ್ಯಾರ್ಥಿ ಪಕ್ಷಿ ನಿರೀಕ್ಷಕರಾಗಿ ಹೊರ ಹೊಮ್ಮಿದ್ದಾರೆೆ.
Related Articles
ಕೇರಳ ಪಕ್ಷಿ ಭೂಪಟ ತಯಾರಿಗಾಗಿ ತೇಕ್ಕಡಿ ವನ್ಯಮೃಗ ಸಂರಕ್ಷಣ ಕೇಂದ್ರದಲ್ಲಿ ನಡೆದ ಹಕ್ಕಿ ಗಣತಿ ಕಾರ್ಯದಲ್ಲಿ ಇವರು ಭಾಗವಹಿಸಿರುವರು. ಇತ್ತೀಚಿಗೆ ತೃಶ್ಶೂರಿನಲ್ಲಿ ಜರಗಿದ ಕೇರಳ ರಾಜ್ಯ ಪಕ್ಷಿ ನಿರೀಕ್ಷಣಾ ತಂಡದ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆೆ. ಹಲವು ಪರಿಸರ ಅಧ್ಯಯನ ಶಿಬಿರಗಳಲ್ಲಿ ಭಾಗವಹಿಸಿದ ಈ ವಿದ್ಯಾರ್ಥಿಗಳು ಇದೀಗ ಕಾಮನಬೈಲು ಪಕ್ಷಿ ಪ್ರೇಮಿ ತಂಡವನ್ನು ರಚಿಸಿಕೊಂಡು ಬಿಡು ಅವಧಿಯಲ್ಲಿ ಬಾನಾಡಿಗಳ ಹುಡುಕಾಟಕ್ಕೆ ತೆರಳುತ್ತಾರೆ.
Advertisement
ಇ ಬರ್ಡ್ ಜಾಲತಾಣದಲ್ಲಿ ದಾಖಲೆಅಣ್ಣ ತಮ್ಮಂದಿಬ್ಬರು ಕಳೆದ ಜೂನ್ ತಿಂಗಳಿನಿಂದ ಆರಂಭಸಿದ ಪಕ್ಷಿ ನಿರೀಕ್ಷಣೆಯ ದಾಖಲಾತಿಯು ಇದೀಗ ಒಂದು ವರುಷ ಪೂರ್ತಿಗೊಳಿಸಿದೆ. ಎರಡು ತಿಂಗಳಿಗೊಮ್ಮೆ ಎರಡು ಗಂಟೆಗಳ ಕಾಲ ತಮ್ಮ ಮನೆ ಪರಿಸರದ ಚಿತ್ರ ವಿಚಿತ್ರ ಬಾನಾಡಿಗಳ ಬಗ್ಗೆ ಕುತೂಹಲಕಾರಿ ಅಂಶಗಳನ್ನು ದಾಖಲಿಸಿದ ಸಹೋದರರಿಬ್ಬರು ಇಲ್ಲಿಯವರೆಗೆ ಗುರುತಿಸಿದ್ದು ಬರೋಬ್ಬರಿ ತೊಂಬತ್ತೆಂಟು ಪಕ್ಷಿಗಳನ್ನು. ವೈಮಾನಿಕ ರೀತಿಯಲ್ಲಿ ಪಕ್ಷಿ ನಿರೀಕ್ಷಣೆ ಮಾಡಿ ಅವುಗಳ ವೈವಿಧ್ಯತೆಯನ್ನು ಇ ಬರ್ಡ್ ಎಂಬ ಜಾಲತಾಣದಲ್ಲಿ ದಾಖಲಿಸಿಕೊಂಡದ್ದು ಇವರ ಸಾಧನೆ. ಕಾಸರಗೋಡಿನ ಉದಯೋನ್ಮುಖ ಪುಟಾಣಿ ಪಕ್ಷಿ ಪ್ರೇಮಿಗಳಾದ ಇವರು ವಲಸೆ ಬರುವ ವಿದೇಶಿ ಹಕ್ಕಿಗಳು, ಪಶ್ಚಿಮ ಘಟ್ಟಗಳಿಗೆ ಸೀಮಿತವಾಗಿರುವ ಪಕ್ಷಿಗಳು ಹಾಗೂ ಅಂತಾರಾಷ್ಟ್ರೀಯ ಪರಿಸರ ಸಂರಕ್ಷಣ ಒಕ್ಕೂಟ ( ಐಯುಸಿಎನ್ ) ಪರಿಗಣಿಸಿರುವ ವಿಶೇಷ ಬಾನಾಡಿಗಳನ್ನೂ ವೀಕ್ಷಿಸಿರುವುದು ಕುತೂಹಲಕಾರಿಯಾಗಿದೆ. ಕೃಷಿ ಕುಟುಂಬದವರ ಪರಿಸರ ಪ್ರೀತಿ ಹಾಗೂ ಅವರು ತೊಡಗಿಸಿಕೊಂಡಿರುವ ಪರಿಸರ ಸಂರಕ್ಷಣೆಯು ಗ್ರಾಮದ ವಿಶೇಷತೆಯಾಗಿದೆ. ಇದು ಪಕ್ಷಿಗಳಿಗೂ ಪೂರಕ ವಾತಾವರಣವನ್ನು ಸೃಷ್ಟಿಸಿದೆ ಎನ್ನುತ್ತಾರೆ ಊರಿನ ಹಿರಿಯರು. ಪರಿಸರ ಪ್ರೇಮಿಗಳು
ಕಾಸರಗೋಡು ಪಕ್ಷಿಪ್ರೇಮಿ ತಂಡದ ಸದಸ್ಯರಾಗಿರುವ ಇವರು ಕೇರಳ ಸಾಮಾಜಿಕ ಅರಣ್ಯ ಇಲಾಖೆ ನಡೆಸುವ ಹಲವು ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಪಕ್ಷಿ ಪ್ರೇಮಿ ಜತೆ ಪರಿಸರ ಪ್ರೇಮವೂ ಹೊಂದಿದ್ದಾರೆ. ಪಕ್ಷಿ ವಿಜ್ಞಾನ ವಿಷಯದಲ್ಲಿ ಹೆಚ್ಚಿನ ಸಂಶೋಧನೆ ಮಾಡಬೇಕೆನ್ನುವ ಗುರಿ ಇರಿಸಿರುವ ಇವರಿಗೆ ಹಿರಿಯ ಪಕ್ಷಿ ನಿರೀಕ್ಷಕರಾದ ಪ್ರಶಾಂತ್ ಪೊಸಡಿಗುಂಪೆ ಹಾಗೂ ಮ್ಯಾಕ್ಸಿಂ ಕೊಲ್ಲಂಗಾನ ಮಾರ್ಗದರ್ಶನ ನೀಡುತ್ತಿದ್ದಾರೆ. ಕಾಮನಬೈಲಿನಲ್ಲಿ ಪಕ್ಷಿ ವೈವಿಧ್ಯ
ಮೀನು ಗೂಬೆ(ಬ್ರೌನ್ ಫಿಶ್ ಅವುಲ್)ಕಾಡು ಗೂಬೆ(ನ್ಪೋಟೆಡ್ ಅವುಲೆಟ್) ಬಿಳಿ ಕತ್ತಿನ ನತ್ತಿಂಗ(ಸವನ್ನಾ ನೈಟ್ ಜಾರ್) ವಿಶೇಷವಾದವುಗಳು. ರಾಜ ಹಕ್ಕಿ(ಏಶಿಯನ್ ಪ್ಯಾರಡೈಸ್ ಫ್ಲೆ$ç ಕ್ಯಾಚರ್), ಕಂದು ಎದೆಯ ನೊಣ ಹಿಡುಕ(ಏಶಿಯನ್ ಬ್ರೌನ್ ಫ್ಲೆ$ç ಕ್ಯಾಚರ್), ಬಿಳಿ ಸಿಪಿಲೆ(ವೈಟ್ ವ್ಯಾಗೆr$çಲ್)ಹೊನ್ನಕ್ಕಿ(ಗೋಲ್ಡನ್ ಓರಿಯಲ್), ಬೂಟು ಕಾಲಿನ ಗಿಡುಗ(ಬೂಟೆಡ್ ಈಗಲ್), ಕಳಿಂಗ (ಬ್ರೌನ್ ಸ್ಟೈಕ್) ಮೊದಲಾದ ವಲಸೆ ಹಕ್ಕಿಗಳನ್ನು ವೀಕ್ಷಿಸಿದ್ದಾರೆ. ವಂಶ ನಾಶ ಭೀತಿಯನ್ನು ಎದುರಿಸುತ್ತಿರುವ ಹೂವಕ್ಕಿ (ಡಾರ್ಟರ್) ಹಾಗೂ ಬಿಳಿ ಕೆಂಬರಲು (ಬ್ಲಾಕ್ ಹೆಡ್ಡೆಡ್ ಐಬಿಸ್) ಹಕ್ಕಿಗಳನ್ನು ನದೀ ತೀರದಲ್ಲಿ ಗುರುತಿಸಿದ್ದಾರೆ. ಪಶ್ಚಿಮ ಘಟ್ಟಕ್ಕೆ ಮಾತ್ರವೇ ಸೀಮಿತವಾಗಿರುವ ಕಂದು ತಲೆಯ ಬುಲ್ ಬುಲ್(ಗ್ರೇ ಹೆಡ್ಡೆಡ್ ಬುಲ್ ಬುಲ್) ಈ ಎಲ್ಲ ಪಕ್ಷಿಗಳು ಕಾಮನಬೈಲಿನಲ್ಲಿ ಈ ಸಹೋದರರು ಗುರುತಿಸಿದ ಪಕ್ಷಿ ಪ್ರಪಂಚವಾಗಿದೆ.