Advertisement

ಗೋವಾ ಬೀಚ್ ನಲ್ಲಿ ಬ್ರಿಟನ್ ಮಹಿಳೆ ಮೇಲೆ ಅತ್ಯಾಚಾರ; ಆರೋಪಿ ಬಂಧನ

10:46 AM Jun 07, 2022 | Team Udayavani |

ಪಣಜಿ: ಉತ್ತರ ಗೋವಾದ ಅರಂಬೋಲ್ ಬೀಚ್ ಸಮೀಪದ ಪ್ರಸಿದ್ಧ ಸ್ವೀಟ್ ಲೇಕ್ ಸಮೀಪ ಬ್ರಿಟನ್ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ 32 ವರ್ಷದ ವ್ಯಕ್ತಿಯೊಬ್ಬನನ್ನು ಗೋವಾ ಪೊಲೀಸರು ಬಂಧಿಸಿರುವುದಾಗಿ ವರದಿ ತಿಳಿಸಿದೆ.

Advertisement

ಇದನ್ನೂ ಓದಿ:ಪಠ್ಯ ಪುಸ್ತಕ ಪರಿಷ್ಕರಣೆ ಗೊಂದಲ: ಸಿಎಂ ಭೇಟಿ ಮಾಡಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್

ಜೂನ್ 2ರಂದು ಸ್ವೀಟ್ ಲೇಕ್ ಸಮೀಪ ಬ್ರಿಟನ್ ಮಹಿಳೆ ವಿಶ್ರಾಂತಿ ಪಡೆಯುತ್ತಿದ್ದಾಗ ಸ್ಥಳೀಯ ನಿವಾಸಿ ಆರೋಪಿ ವಿನ್ಸೆಂಟ್ ಡಿ’ಸೋಜಾ ಅತ್ಯಾಚಾರ ನಡೆಸಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಸಂತ್ರಸ್ತ ಬ್ರಿಟನ್ ಮಹಿಳೆ ತನ್ನ ಪತಿ ಜೊತೆ ಗೋವಾ ಪ್ರವಾಸಕ್ಕೆ ಆಗಮಿಸಿರುವುದಾಗಿ ವರದಿ ವಿವರಿಸಿದೆ. ಘಟನೆಗೆ ಸಂಬಂಧಿಸಿದಂತೆ ಸೋಮವಾರ ದಂಪತಿ ದೂರು ದಾಖಲಿಸಿರುವುದಾಗಿ ಅಧಿಕಾರಿಗಳು ತಿಳಿಸಿರುವುದಾಗಿ ವರದಿ ಹೇಳಿದೆ.

ಅತ್ಯಾಚಾರ ಪ್ರಕರಣದಲ್ಲಿ ಆರೋಪಿ ವಿನ್ಸೆಂಟ್ ಡಿ’ಸೋಜಾನನ್ನು ಬಂಧಿಸಿದ್ದು, ಭಾರತೀಯ ದಂಡ ಸಂಹಿತೆ ಕಲಂನಡಿ ಪ್ರಕರಣ ದಾಖಲಾಗಿದೆ. ಆರೋಪಿಯ ವಿಚಾರಣೆ ನಡೆಯುತ್ತಿರುವುದಾಗಿ ವರದಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next