Advertisement

United Kingdom ಚುನಾವಣೆ: ಭಾರತಕ್ಕೆ ಸಿಹಿ/ಕಹಿ?

12:37 AM Jul 06, 2024 | Team Udayavani |

ಲಂಡನ್‌: ಲೇಬರ್‌ ಪಕ್ಷದ ನಾಯಕ ಕೀರ್‌ ಸ್ಟರ್ಮರ್‌ ಅವರು ಯುಕೆ ನೂತನ ಪ್ರಧಾನಿಯಾಗುವತ್ತ ಹೆಜ್ಜೆಯಿ ಟ್ಟಿರುವಂತೆಯೇ, ಭಾರತ-ಬ್ರಿಟ ನ್‌ ಸಂಬಂಧದ ಮುಂದಿನ ಶಕೆಯ ಬಗ್ಗೆ ಕುತೂಹಲ ಆರಂಭವಾಗಿದೆ.
ಹಿಂದಿನಿಂದಲೂ ಕಾಶ್ಮೀರ ಸಹಿತ ಕೆಲವು ವಿಚಾರ ಗಳಲ್ಲಿ ಲೇಬರ್‌ ಪಕ್ಷದ ನಿಲುವು ಭಾರತ ಸರಕಾರ‌ಕ್ಕೆ ವಿರುದ್ಧವಾಗಿತ್ತು. ಅಲ್ಲದೆ ಆ ಪಕ್ಷ ಪಾಕ್‌ ಪರ ಧೋರಣೆ ಹೊಂದಿತ್ತು. ಜತೆಗೆ ಲೇಬರ್‌ ಪಕ್ಷದೊಳಗೆ ಖಲಿಸ್ಥಾನ ಪರ ನಿಲುವುಳ್ಳವರ ಸಂಖ್ಯೆ ಕೂಡ ಹೆಚ್ಚಿರುವುದು ಭಾರತದ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ಎಲ್ಲ ಧೋರಣೆಗಳ ಕಾರಣಕ್ಕೇ ಬ್ರಿಟ ನ್‌ ನಲ್ಲಿ ಲೇಬರ್‌ ಪಾರ್ಟಿ ವಿರುದ್ಧ ಭಾರತೀಯರು ತಿರುಗಿಬಿದ್ದಿದ್ದರು. ಆದರೆ ಈ ಬಾರಿಯ ಚುನಾವಣೆಯಲ್ಲಿ ಲೇಬರ್‌ ನಾಯಕ ಸ್ಟರ್ಮರ್‌ ಭಾರತೀಯ ಸಮುದಾಯವನ್ನು ಸೆಳೆಯುವ ನಿಟ್ಟಿನಲ್ಲಿ ರೂಪಿಸಿದ ಕಾರ್ಯತಂತ್ರ ಯಶಸ್ವಿಯಾಗಿದೆ.

Advertisement

ಕಾಶ್ಮೀರ ವಿಚಾರದಲ್ಲಿ ಬದಲಾದ ನಿಲುವು

2019ರಲ್ಲಿ ಲೇಬರ್‌ ಪಕ್ಷ, “ಕಾಶ್ಮೀರದ ಜನರಿಗೆ ಸ್ವಯಂ ನಿರ್ಧಾರ ಕೈಗೊಳ್ಳುವ ಹಕ್ಕಿದೆ. ಹೀಗಾಗಿ ಅಂತಾರಾಷ್ಟ್ರೀಯ ವೀಕ್ಷಕರು ಕೂಡಲೇ ಕಾಶ್ಮೀರವನ್ನು ಪ್ರವೇಶಿಸಬೇಕು’ ಎಂಬ ತುರ್ತು ನಿರ್ಣಯವನ್ನು ಅಂಗೀ ಕ ರಿಸಿತ್ತು. ಆದರೆ ಈಗ ಸ್ಟರ್ಮರ್‌, ಕಾಶ್ಮೀರ ಭಾರತದ ಆಂತರಿಕ ವಿಚಾರ, ಅದರಲ್ಲಿ ನಾವು ತಲೆಹಾಕುವುದಿಲ್ಲ ಎಂದು ಹೇಳುವ ಮೂಲಕ ಭಾರತದ ಪರ ಮೃದುಧೋರಣೆ ಪ್ರದರ್ಶಿಸಿದ್ದಾರೆ. ಅತ್ಯಂತ ವೇಗ ವಾಗಿ ಬೆಳೆಯುತ್ತಿರುವ ಆರ್ಥಿಕತೆಯಾದ ಭಾರತವನ್ನು ಯುಕೆ ಸುಲಭವಾಗಿ ತಳ್ಳಿಹಾಕಲು ಆಗುವುದಿಲ್ಲ. ಅದೇ ಕಾರಣಕ್ಕಾಗಿ ಭಾರತ ದೊಂದಿಗೆ “ಹೊಸ ವ್ಯೂಹಾತ್ಮಕ ಪಾಲುದಾರಿಕೆ’ಗೆ ಸಿದ್ಧವಿ ರುವುದಾಗಿ ಪ್ರಣಾಳಿಕೆಯಲ್ಲೇ ಲೇಬರ್‌ ಪಕ್ಷ ಘೋಷಿ ಸಿದೆ. ಈ ಆಶ್ವಾಸನೆಗಳು ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ಬರುತ್ತವೆ ಎಂದು ಕಾದು ನೋಡಬೇಕಷ್ಟೆ.

ವಕೀಲಿಕೆಯಿಂದ ಪಿಎಂ ಹುದ್ದೆಗೆ ಕೀರ್‌
61 ವರ್ಷದ ಕೀರ್‌ ಸ್ಟರ್ಮರ್‌ ಬ್ರಿಟನ್‌ನ ಮುಂದಿನ ಪ್ರಧಾನಿಯಾ ಗಲಿ ದ್ದಾರೆ. ಆಕ್ಸ್‌ಫ‌ರ್ಡ್‌ ವಿವಿಯಿಂದ ಸ್ನಾತ ಕೋತ್ತರ ಪದವಿ ಪಡೆದ ಸ್ಟರ್ಮರ್‌, ತಮ್ಮ ಕುಟುಂಬ ದಲ್ಲೇ ವಿವಿ ಮೆಟ್ಟಿಲು ಹತ್ತಿದ ಮೊದಲಿಗರಾಗಿದ್ದಾರೆ. ವೃತ್ತಿಯಿಂದ ವಕೀಲ ರಾಗಿ ಸಾಕಷ್ಟು ಮಹತ್ವದ ಪ್ರಕರಣಗಳನ್ನು ನಿಭಾಯಿಸಿದ್ದಾರೆ. ಮಾಜಿ ಪ್ರಧಾನಿ ಟೋನಿ ಬ್ಲೇರ್‌ ಅವಧಿಯಲ್ಲಿ ಸ್ಟರ್ಮರ್‌ ಮಾನವ ಹಕ್ಕುಗಳ ಸಲಹೆಗಾರರಾಗಿದ್ದರು. 2008ರಿಂದ 2013ರ ವರೆಗೆ ಕಾನೂನು ಸಲಹೆಗಾರರಾಗಿ ಸ್ಟರ್ಮರ್‌ ಕಾರ್ಯ ನಿರ್ವಹಿಸಿದ್ದಾರೆ. 2014ರಲ್ಲಿ ರಾಜಕೀಯಕ್ಕೆ ಪದಾರ್ಪಣೆ ಮಾಡಿದ ಸ್ಟರ್ಮರ್‌, 2015ರಲ್ಲಿ ಹೊಲ್ಬೊರ್ನ್ ಹಾಗೂ ಸೇಂಟ್‌ ಪ್ಯಾಂಕ್ರಾಸ್‌ ಸಂಸ ದರಾಗಿ ಚುನಾಯಿತ ರಾದರು. ವಿಪಕ್ಷಗಳಲ್ಲಿ ವಿವಿಧ ಜವಾಬ್ದಾರಿ ನಿರ್ವಹಿಸಿದ್ದು, 2020ರಲ್ಲಿ ಜೆರೆಮಿ ಕಾರ್ಬಿನ್‌ ಲೇಬರ್‌ ನಾಯಕ ಸ್ಥಾನಕ್ಕೆ ರಾಜೀ ನಾಮೆ ನೀಡಿದ ಅನಂತರ, ಸ್ಟರ್ಮರ್‌ ಪಕ್ಷದ ಸಾರಥ್ಯ  ವಹಿಸಿಕೊಂಡರು. ಆರ್ಥಿಕ ಪ್ರಗತಿ, ಸಾಮಾಜಿಕ ನ್ಯಾಯ, ಹಸುರು ಇಂಧನದಲ್ಲಿ ಹೂಡಿಕೆ, ಕೌಶಲಾಭಿವೃದ್ಧಿ ಹಾಗೂ ಇತರ ಅಭಿವೃದ್ಧಿ ಯೋಜನೆ  ರೂಪಿಸಿಕೊಂಡಿರುವ ಕೀರ್‌ ಸ್ಟರ್ಮರ್‌ ಸದ್ಯ ಪ್ರಧಾನಿಯಾಗಿ ಬ್ರಿಟನ್‌ ಮುನ್ನಡೆಸಲಿದ್ದಾರೆ.

ಭಾವಿ ಪಿಎಂ ಸ್ಟರ್ಮರ್‌ ಪ್ರೇಮ ಕತೆ ವೈರಲ್‌!
ಕೀರ್‌ ಸ್ಟರ್ಮರ್‌ ಹಾಗೂ ಪತ್ನಿ ವಿಕ್ಟೋ ರಿಯಾ ಪ್ರೇಮ ಕತೆ ವೈರಲ್‌ ಆಗು ತ್ತಿದೆ. ಇಬ್ಬರೂ ವಕೀಲ ರಾಗಿದ್ದ ಸಂದರ್ಭ ಫೋನ್‌ ಸಂಭಾಷಣೆಯಲ್ಲಿ “ಈ ವ್ಯಕ್ತಿ ತನ್ನನ್ನು ತಾನು ಏನೆಂದು ತಿಳಿದು ಕೊಂಡಿದ್ದಾನೆ?’ ಎಂದು ವಿಕ್ಟೋ ರಿಯಾ ಕೀರ್‌ಗೆ ಹೇಳಿದ್ದರಂತೆ. ಅದೇ ಇವರಿಬ್ಬರ ನಡುವಿನ ಮೊದಲ ಮಾತು! ಬಳಿಕ ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದರು.

Advertisement

ಹಿಂದೂ ಅಭ್ಯರ್ಥಿಗಳ‌ ಕಣಕ್ಕೆ ಇಳಿಸಿದ್ದ ಲೇಬರ್‌!
ಬ್ರಿಟನ್‌ನಲ್ಲಿರುವ ಹಿಂದೂ ಮತ ಗಳಿಸುವಲ್ಲಿ ಲೇಬರ್‌ ಯಶಸ್ವಿಯಾಗಿದೆ. ಹಿಂದೂ ವಿರುದ್ಧ ನಕಾರಾತ್ಮಕ ಭಾವನೆಗಳು (ಹಿಂದೂ ಫೋಬಿಯಾ) ಸುಳ್ಳು ಎಂದು ಆ ಪಕ್ಷದ ನಾಯಕರು ಹೇಳಿ ಕೊಂಡಿದ್ದರು. ಹಿಂದೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ವುದರಿಂದ ಹಿಡಿದು ಹಿಂದೂಗಳ ಒಕ್ಕೂಟದ ಸಮಸ್ಯೆಗಳನ್ನು ಆಲಿಸುವವರೆಗೆ ಕೈಗೊಂಡ ತಂತ್ರ ಫ‌ಲ ನೀಡಿವೆ. ದೇಗುಲಗಳಿಗೆ ಭದ್ರತೆ ನೀಡುವುದರ ಬಗ್ಗೆಯೂ ವಾಗ್ಧಾನ ಮಾಡಿತ್ತು. ಅದು ಆ ಪಕ್ಷಕ್ಕೆ ಹೆಚ್ಚಿನ ಮತಗಳನ್ನು ತಂದುಕೊಟ್ಟವು.

ಪ್ಯಾಲೆಸ್ತೀನ್‌ ಪರವಿದ್ದ ಐವರು ನಾಯಕರ ಜಯ
ಇಸ್ರೇಲ್‌ ಪರ ನಿಲುವನ್ನು ಹೊಂದಿದ್ದ ಬ್ರಿಟನ್‌ನಲ್ಲಿ ಪ್ಯಾಲೆಸ್ತೀನ್‌ ಪರ ನಿಲುವು ಹೊಂದಿರುವವರ ನಾಯಕರ ಪ್ರಭಾವವೂ ಹೆಚ್ಚಾಗಿದೆ. ಕನ್ಸರ್ವೇಟಿವ್‌ ಮತ್ತು ಲೇಬರ್‌ ಪಕ್ಷಗಳ ಸೆಣಸಾಟದ ನಡುವೆಯೇ ಬ್ರಿಟನ್‌ನಲ್ಲಿ ಸ್ವತಂತ್ರ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದ ಪ್ಯಾಲೆಸ್ತೀನ್‌ ಪರವಾಗಿರುವ ಐವರು ನಾಯಕರು ಜೆರ್ಮಿ ಕಾರ್ಬನ್‌, ಶಾಕ್ಯಾಟ್‌ ಆ್ಯಡಂ, ಆಯುಬ್‌ ಖಾನ್‌, ಅದ್ನಾನ್‌ ಹುಸೇನ್‌, ಇಕ್ಬಾಲ್‌ ಮೊಹಮ್ಮದ್‌ ಜಯ ಸಾಧಿಸಿದ್ದಾರೆ.

ಪಕ್ಷಗಳ ಬಲಾಬಲ (ಒಟ್ಟು 650)
ಪಕ್ಷ ಸ್ಥಾನ ಗಳಿಸಿದ್ದು/ಕಳೆದುಕೊಂಡಿದ್ದು
ಲೇಬರ್‌ ಪಕ್ಷ 412 +211
ಕನ್ಸರ್ವೇಟಿವ್‌ 121 -250
ಲಿಬರಲ್‌ ಡೆಮಾಕ್ರಾಟಿಕ್‌ 71 +63
ಸ್ಕಾಟಿಷ್‌ ನ್ಯಾಶನಲ್‌ ಪಾರ್ಟಿ 9 -38
ಸಿನ್‌ ಫೈನ್‌ 7 ಬದಲಾವಣೆ ಇಲ್ಲ
ಇತರ 28 +14

-ಪ್ರಜಾಪ್ರಭುತ್ವದ ಹೃದಯದ ಬಡಿತ ಶುರು ವಾಗುವುದು ವೆಸ್ಟ್‌ಮಿನ್‌ಸ್ಟರ್‌ನಲ್ಲಿಲ್ಲ, ಮತದಾನ ಅಸ್ತ್ರ ಹಿಡಿದಿರುವ ಜನರಿಂದ. ರಾಜಕೀಯ ಇರುವುದು ಉತ್ತಮ ಉದ್ದೇಶಕ್ಕೆ ಬಳಸಲು ಎನ್ನುವುದನ್ನು ನಾವು ತೋರಿಸಬೇಕಿದೆ.
ಕೀರ್‌ ಸ್ಟರ್ಮರ್‌, ಬ್ರಿಟನ್‌ ಪ್ರಧಾನಿ

-ಚುನಾವಣೆಯಲ್ಲಿ ಗೆದ್ದ ನಾಯಕ ಕೀರ್‌ ಸ್ಟರ್ಮರ್‌ಗೆ ಅಭಿನಂದನೆ. ಭಾರತ- ಬ್ರಿಟನ್‌ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ನಿಮ್ಮ ರಚನಾತ್ಮಕ ಸಹಭಾಗಿತ್ವವನ್ನು ಎದುರು ನೋಡುತ್ತೇನೆ.
ನರೇಂದ್ರ ಮೋದಿ, ಪ್ರಧಾನಿ

ನನ್ನನ್ನು ಕ್ಷಮಿಸಿ, ಸೋಲಿಗೆ ನಾನೇ ಹೊಣೆ: ರಿಷಿ ಸುನಕ್‌
“ನಿಮ್ಮ ಕೋಪ, ಬೇಸರ ಎಲ್ಲವನ್ನೂ ನಾನು ಬಲ್ಲೆ, ನನ್ನನ್ನು ಕ್ಷಮಿಸಿ! ಈ ಚುನಾವಣೆಯ ಸೋಲಿನ ಹೊಣೆಯನ್ನೂ ನಾನೆ ಹೊರುತ್ತೇನೆ’ ಹೀಗೆಂದು ಬ್ರಿಟನ್‌ ಮಾಜಿ ಪ್ರಧಾನಿ ರಿಷಿ ಸುನಕ್‌ ಹೇಳಿದ್ದಾರೆ. ಕನ್ಸರ್ವೇಟಿವ್‌ ಪಕ್ಷದ ಸೋಲಿನ ಹಿನ್ನೆಲೆಯಲ್ಲಿ ತಮ್ಮ ಪಕ್ಷದ ಸದಸ್ಯರೆಲ್ಲರ ಬಳಿ ರಿಷಿ ಕ್ಷಮೆಯಾಚಿಸಿದ್ದಾರೆ. ನಮ್ಮ ಪಕ್ಷದ ಎಲ್ಲ ಸದಸ್ಯರು, ಕಾರ್ಯ ಕರ್ತರೂ ಅವಿರತ ವಾಗಿ ಶ್ರಮಿಸಿ ದೇಶಕ್ಕೆ, ಸಮುದಾಯಗಳಿಗೆ ಕೊಡುಗೆ ನೀಡಿದ್ದಾರೆ. ಆದರೆ ನಿಮ್ಮೆಲ್ಲರ ಶ್ರಮಕ್ಕೆ ತಕ್ಕದಾದ ಪ್ರತಿಫ‌ಲ ತರುವಲ್ಲಿ ನಾವು ಸೋತಿದ್ದೇವೆ. ಈ ಸೋಲಿನ ಹೊಣೆ ನನ್ನದೇ! ನನ್ನನ್ನು ಕ್ಷಮಿಸಿ ಎಂದಿದ್ದಾರೆ. ಜತೆಗೆ ದೇಶವಾಸಿಗಳಿಗೂ ಧನ್ಯವಾದ ತಿಳಿಸಿರುವ ಅವರು, ಪ್ರಧಾನಿಯಾಗಿ ಎಲ್ಲ ರೀತಿಯ ಸೇವೆಯನ್ನೂ ನಾನು ಸಲ್ಲಿಸಿದ್ದೇನೆ. ಆದಾಗ್ಯೂ ಸರಕಾರ‌ ಬದಲಾಗಬೇಕು ಎಂಬ ನಿರ್ಧಾರ ನಿಮ್ಮದು! ಆ ನಿರ್ಧಾರವೇ ಅಂತಿಮ ನಾನು ಅದನ್ನು ಗೌರವಿಸುತ್ತೇನೆ ಎಂದೂ ಹೇಳಿದ್ದಾರೆ.

ರಿಷಿ ಸುನಕ್‌ ಪಕ್ಷದ ಸೋಲಿಗೆ ಕಾರಣ?
ದೇಶದ ಆರ್ಥಿಕ ಸ್ಥಿತಿ ಭಾರೀ ಕುಸಿತ
ಬ್ರೆಕ್ಸಿಟ್‌(2016) ಬಳಿಕ ದೇಶದ
ಜನರ ಜೀವನ ಮಟ್ಟ ಕುಸಿದಿದ್ದು
ವೇತನ ಪ್ರಮಾಣ ಇಳಿಕೆ, ಆಹಾರ ವಸ್ತುಗಳ ಬೆಲೆ ಗಣನೀಯ ಏರಿಕೆ
ಕನ್ಸರ್ವೇಟಿವ್‌ ಪಕ್ಷದೊಳಗಿನ ಅನಿಶ್ಚಿತತೆ, ಬಿಕ್ಕಟ್ಟು

ಭಾರತ ಮೂಲದ 26 ಮಂದಿಗೆ ಗೆಲುವು!
ಲಂಡನ್‌: ಬ್ರಿಟನ್‌ ಚುನಾವಣೆಯಲ್ಲಿ ಈ ಬಾರಿ ದಾಖಲೆಯ 26 ಭಾರತ ಮೂಲದವರು ಗೆಲವು ಸಾಧಿಸಿದ್ದಾರೆ. ಲೇಬರ್‌ ಪಕ್ಷದಿಂದ ಸೀಮಾ ಮಲ್ಹೊತ್ರಾ, ವೆಲೆರಿ ವಾಜ್‌, ಲಿಸಾ ನಂದಿ, ಪ್ರೀತ್‌ಕೌರ್‌ ಗಿಲ್‌, ತನ್ಮಂಜೀತ್‌ ಸಿಂಗ್‌, ನವೆಂದು ಮಿಶ್ರಾ, ನಾಡಿಯಾ ವಿಟ್ಟೊಮೆ ಸಂಸತ್‌ಗೆ ಮರು ಆಯ್ಕೆಗೊಂಡಿದ್ದಾರೆ. ಕನ್ಸರ್ವೇಟಿವ್‌ನಿಂದ ಸುನ ಕ್‌, ಬ್ರೆವರ್ಮನ್‌, ಪ್ರೀತಿ ಪಟೇಲ್‌, ಕ್ಲೇರ್‌ ಕುಟಿನ್ಹೋ, ಗಗನ್‌ ಮೊಹಿಂದ್ರ, ಶಿವಾನಿ ರಾಜಾ ಚುನಾವಣೆಯಲ್ಲಿ ಮತ್ತೆ ಗೆಲುವು ಸಾಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next