Advertisement

ಬ್ರಿಟಾನಿಯಾ ಬಿಸ್ಕತ್‌ಗೂ ತಟ್ಟಿದ ಆರ್ಥಿಕ ಹಿಂಜರಿತದ ಬಿಸಿ

10:10 AM Nov 21, 2019 | Hari Prasad |

ನವದೆಹಲಿ: ಬಿಸ್ಕತ್‌ ಉತ್ಪಾದನೆ ದೈತ್ಯ ಬ್ರಿಟಾನಿಯಾ ಸಂಸ್ಥೆಯು, ಆರ್ಥಿಕ ಹಿಂಜರಿತದಿಂದ ತನ್ನ ಉತ್ಪನ್ನಗಳ ಬಿಡುಗಡೆಯ ದಿನಾಂಕವನ್ನು ಮುಂದೂಡಿದೆ. ಮಾರುಕಟ್ಟೆಯಲ್ಲಿ ಚೇತರಿಸಿಕೊಳ್ಳಲು ಇನ್ನೂ 9-12 ತಿಂಗಳು ಬೇಕಾಗಬಹುದು ಎಂದು ನಿರೀಕ್ಷೆ ಮಾಡಿದೆ.

Advertisement

ನಾವು ನಮ್ಮ ಉತ್ಪನ್ನಗಳ ಬಿಡುಗಡೆಗೆ ಕ್ಯಾಲೆಂಡರ್‌ನಲ್ಲಿ ಸಮಯ ನಿಗದಿಪಡಿಸಿದ್ದೆವು. ಆದರೆ, ಆರ್ಥಿಕ ಕುಸಿತ ಕಾಣಲು ಆರಂಭಿಸಿದಾಗ ಬಿಡುಗಡೆ ಸಮಯವನ್ನು ಮುಂದೂಡಲು ನಿರ್ಧರಿಸಿದ್ದೇವೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವರುಣ್‌ ಬೆರ್ರಿ ತಿಳಿಸಿದ್ದಾರೆ. ಗ್ರಾಮೀಣ ಭಾಗದಲ್ಲೂ ಹೆಸರಾಗಿರುವ ಬ್ರಿಟಾನಿಯಾಕ್ಕೆ ಅಲ್ಲೇ ಹೆಚ್ಚು ನಷ್ಟವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next