Advertisement
ಸರಕಾರದ ಅಧಿಕೃತ ಅಂಕಿಅಂಶದ ಪ್ರಕಾರ ಇಷ್ಟರ ತನಕ 12,107 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. ಆದರೆ ನರ್ಸಿಂಗ್ ಹೋಮ್‌ಗಳು ಮತ್ತು ಮನೆಗಳಲ್ಲಿ ಸಂಭವಿಸಿದ ಸಾವಿನ ಲೆಕ್ಕ ಇದರಲ್ಲಿ ಸೇರಿಲ್ಲ. ಈ ಸಾವುಗಳನ್ನೂ ಸೇರಿಸಿಕೊಂಡರೆ ಸರಕಾರ ಹೇಳಿರುವುದಕ್ಕಿಂತ ಕನಿಷ್ಠವೆಂದರೂ ಶೇ. 10 ಹೆಚ್ಚು ಸಾವುಗಳು ಸಂಭವಿಸಿರುವ ಸಾಧ್ಯತೆಯಿದೆ.
Related Articles
Advertisement
ವಿತ್ತ ಸಚಿವ ರಿಷಿ ಸುನಕ್ ಅವರಿಗೆ ವಾಸ್ತವ ಸ್ಥಿತಿಯ ಬಗ್ಗೆ ಅರಿವಿದ್ದಂತೆ ಕಾಣಿಸುತ್ತಿದೆ. ದೇಶದಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ನಾವು ಪ್ರಾಮಾಣಿಕವಾಗಿ ಜನರಿಗೆ ತಿಳಿಸಬೇಕು. ದೇಶ ಈಗ ಸಂಕಷ್ಟದಲ್ಲಿದೆ ಮತ್ತು ಮುಂದಿನ ದಿನಗಳಲ್ಲಿ ಇನ್ನಷ್ಟು ಸಂಕಷ್ಟಗಳು ಬರಲಿವೆ ಎಂದಿದ್ದಾರೆ ಸುನಕ್.
ಅಮೆರಿಕ ಹಾಗೂ ಇತರ ಕೆಲವು ದೇಶಗಳಂತೆ ಬ್ರಿಟನ್‌ನಲ್ಲೂ ನರ್ಸಿಂಗ್ ಹೋಮ್‌ಗಳು ಸೋಂಕಿನ ಹಾಟ್‌ಸ್ಪಾಟ್ ಆಗಿವೆ. ಎರಡು ಪ್ರಮುಖ ಖಾಸಗಿ ನರ್ಸಿಂಗ್ ಹೋಮ್ ನಿರ್ವಾಹಕರು ಇತ್ತೀಚೆಗಿನ ಕೆಲವು ದಿನಗಳಲ್ಲಿ 521 ಮಂದಿ ಅಸುನೀಗಿರುವುದಾಗಿ ಹೇಳಿಕೊಂಡಿವೆ. ಆದರೆ ಈ ಸಾವುಗಳಿನ್ನೂ ಬ್ರಿಟನ್‌ನ ಅಧಿಕೃತ ಅಂಕಿಅಂಶಗಳಿಗೆ ಸೇರ್ಪಡೆಯಾಗಿಲ್ಲ.
ಸಾರ್ವಜನಿಕ ಆರೋಗ್ಯ ಇಲಾಖೆ ನಿತ್ಯ ಪ್ರಕಟಿಸುವ ಸಾವಿನ ಸಂಖ್ಯೆಯೇ ಈಗ ಬ್ರಿಟನ್‌ನಲ್ಲಿ ಕೋವಿಡ್‌ನ ಪರಿಣಾಮವನ್ನು ಲೆಕ್ಕಹಾಕುವ ಮಾಪಕ. ಆದರೆ ಈ ಅಂಕಿಅಂಶದಲ್ಲಿ ಆಸ್ಪತ್ರೆಗಳಲ್ಲಿ ಸಂಭವಿಸಿದ ಸಾವಿನ ಲೆಕ್ಕವನ್ನು ಮಾತ್ರ ಹೇಳಲಾಗುತ್ತದೆ. ಸರಕಾರ ಸಾವಿನ ಸಂಖ್ಯೆಯನ್ನು ಕಡಿಮೆ ತೋರಿಸುವ ಮೂಲಕ ತನ್ನ ವರ್ಚಸ್ಸು ವೃದ್ಧಿಗೆ ಗಮನ ಕೊಟ್ಟಿದೆಯೇ ಎಂಬ ಅನುಮಾನ ಈಗ ಕಾಡುತ್ತಿದೆ.
ಸಮರ್ಪಕ ವ್ಯವಸ್ಥೆಯಿಲ್ಲನರ್ಸಿಂಗ್ ಹೋಮ್‌ಗಳಲ್ಲಿ ಸಂಭವಿಸುವ ಸಾವಿನ ಲೆಕ್ಕವನ್ನು ಸೇರಿಸಿಕೊಳ್ಳಲು ತಯಾರಿದ್ದೇವೆ. ಆದರೆ ಆಸ್ಪತ್ರೆಗಳಂತೆ ನರ್ಸಿಂಗ್ ಹೋಮ್‌ಗಳ ಸಾವಿನ ಲೆಕ್ಕವನ್ನು ಪ್ರಕಟಿಸುವ ಕೇಂದ್ರೀಕೃತ ವ್ಯವಸ್ಥೆಯಿಲ್ಲ ಎನ್ನುತ್ತಾರೆ ಬ್ರಿಟನ್ ಅಧಿಕಾರಿಗಳು. 2000 ನರ್ಸಿಂಗ್ ಹೋಮ್‌ಗಳಲ್ಲಿ ಕೋವಿಡ್
ಬ್ರಿಟನ್‌ನ ವೈದ್ಯಕೀಯ ಅಧಿಕಾರಿಯೊಬ್ಬರು ಹೇಳುವಂತೆ, ಶೇ. 13 ನರ್ಸಿಂಗ್ ಹೋಮ್‌ಗಳಲ್ಲಿ ಅಂದರೆ 2000ಕ್ಕೂ ಹೆಚ್ಚು ನರ್ಸಿಂಗ್ ಹೋಮ್‌ಗಳಲ್ಲಿ ಕೋವಿಡ್ ವೈರಸ್ ಸೋಂಕಿತರು ಇದ್ದಾರೆ. ಈ ನರ್ಸಿಂಗ್ ಹೋಮ್‌ಗಳ ಸಿಬಂದಿ ಮಾಸ್ಕ್, ಗ್ಲೌಸ್ ಮತ್ತಿತರ ಸುರಕ್ಷಾ ಸಾಧನಗಳ ಕೊರತೆಯಿರುವ ಕುರಿತು ದೂರಿಕೊಂಡಿದ್ದಾರೆ. ನರ್ಸಿಂಗ್ ಹೋಮ್‌ಗಳನ್ನು ಖಾಸಗಿಯವರು ಮತ್ತು ಸಮಾಜ ಸೇವಾ ಸಂಘಗಳು ನಡೆಸುವುದರಿಂದ ಸರಕಾರಕ್ಕೆ ಇವುಗಳಲ್ಲಿ ಸಂಭವಿಸುವ ಸಾವಿನ ಸಮರ್ಪಕ ವರದಿಗಳು ಸಿಗುತ್ತಿಲ್ಲ ಎನ್ನಲಾಗುತ್ತಿದೆ. ಒಂದು ಪುಟ್ಟ ಲೆಕ್ಕ
ವರ್ಷದ ಆರಂಭದಿಂದ ತೊಡಗಿ ಎ.3ರ ತನಕ ಇಂಗ್ಲಂಡ್ ಮತ್ತು ವೇಲ್ಸ್‌ನ ಖಾಸಗಿ ನರ್ಸಿಂಗ್ ಹೋಂಗಳಲ್ಲಿ ಕ್ರಮವಾಗಿ 217 ಮತ್ತು 136 ಮಂದಿ ಅಸುನೀಗಿದ್ದಾರೆ. ಕೋವಿಡ್‌ನಿಂದ ಶೇ. 90 ಸಾವುಗಳು ಸಂಭವಿಸಿರುವುದು ಆಸ್ಪತ್ರೆಗಳಲ್ಲಿ. ಉಳಿದ ಶೇ. 10 ಸಾವುಗಳು ನರ್ಸಿಂಗ್ ಹೋಮ್‌ಗಳು ಅಥವಾ ಮನೆಗಳಲ್ಲಿ ಸಂಭವಿಸಿವೆ. ಈ ಅಂಕಿಅಂಶದಲ್ಲಿ ಸ್ಕಾಟ್‌ಲ್ಯಾಂಡ್ ಮತ್ತು ನಾರ್ದರ್ನ್ ಐಲ್ಯಾಂಡ್‌ನ ಸಾವುಗಳು ಸೇರಿಲ್ಲ. ಪರೀಕ್ಷೆ ಸೌಲಭ್ಯದ ಕೊರತೆ
ಬ್ರಿಟನ್‌ನಲ್ಲಿ ಪರೀಕ್ಷಾ ಸೌಲಭ್ಯಗಳ ತೀವ್ರ ಕೊರತೆಯಿದೆ. ಹೀಗಾಗಿ ಯಾವ ರೋಗದಿಂದ ಸತ್ತಿದ್ದಾರೆ ಎಂಬ ಖಚಿತ ಲೆಕ್ಕ ಸಿಗುತ್ತಿಲ್ಲ. ನಿತ್ಯ 1 ಲಕ್ಷ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ಸರಕಾರ ಹೇಳಿದ್ದರೂ ಇಷ್ಟರ ತನಕ ಸಾಧ್ಯವಾಗಿರುವುದು ಸರಾಸರಿ 14,500 ಮಾತ್ರ.