ಬ್ರಿಸ್ಬೇನ್: ಬಾರ್ಡರ್- ಗವಾಸ್ಕರ್ ಸರಣಿಯ ಅಂತಿಮ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡಿರುವ ಭಾರತ ಮೊದಲ ಇನ್ನಿಂಗ್ಸ್ ಹಿನ್ನಡೆ ಭೀತಿಯಲ್ಲಿದೆ. ಕನ್ನಡಿಗ ಮಯಾಂಕ್ ಅಗರ್ವಾಲ್ ಮತ್ತು ಕಳೆದ ಪಂದ್ಯದ ಹೀರೊ ರಿಷಭ್ ಪಂತ್ ಕ್ರೀಸ್ ನಲ್ಲಿದ್ದು, ಉತ್ತಮ ಜೊತೆಯಾಟದ ಲೆಕ್ಕಾಚಾರದಲ್ಲಿದ್ದಾರೆ.
ಊಟದ ವಿರಾಮದ ವೇಳೆ ಭಾರತ ತಂಡ ನಾಲ್ಕು ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿದೆ. ಇನ್ನೂ 208 ರನ್ ಹಿನ್ನಡೆಯಲ್ಲಿದೆ. ಆಸೀಸ್ ಮೊದಲ ಇನ್ನಿಂಗ್ಸ್ ನಲ್ಲಿ 369 ರನ್ ಗಳಿಸಿತ್ತು.
ಎರಡನೇ ದಿನದಾಟದ ಅಂತ್ಯಕ್ಕೆ ಭಾರತ ತಂಡ ಎರಡು ವಿಕೆಟ್ ನಷ್ಟಕ್ಕೆ 62 ರನ್ ಗಳಿಸಿತ್ತು. 25 ರನ್ ಗಳಿಸಿದ ಚೇತೇಶ್ವರ ಪೂಜಾರ ಇಂದು ಮೊದಲನೆಯವರಾಗಿ ಔಟಾದರು. ನಾಯಕ ಅಜಿಂಕ್ಯ ರಹಾನೆ 37 ರನ್ ಗಳಿಸಿ ಸ್ಟಾರ್ಕ್ ಗೆ ವಿಕೆಟ್ ಒಪ್ಪಿಸಿದರು.
ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಆಗಮಿಸಿದ ಮಯಾಂಕ್ 38 ರನ್ ಗಳಿಸಿ ಆಡುತ್ತಿದ್ದಾರೆ. ರಿಷಭ್ ಪಂತ್ ನಾಲ್ಕು ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.
ಆಸೀಸ್ ಪರ ಸ್ಟಾರ್ಕ್, ಹ್ಯಾಜಲ್ ವುಡ್, ಕಮಿನ್ಸ್ ಮತ್ತು ಲಯಾನ್ ತಲಾ ಒಂದು ವಿಕೆಟ್ ಪಡೆದರು.