ಮಂಗಳವಾರ ಆಸ್ಟ್ರೇಲಿಯ ವಿರುದ್ಧದ ಅತ್ಯಂತ ನಿರ್ಣಾಯಕ ಪಂದ್ಯದಲ್ಲಿ ಇಂಗ್ಲೆಂಡ್ ಸೋತು ನಿಟ್ಟುಸಿರುಬಿಡುತ್ತಿದೆ. ಸದ್ಯದ ಸ್ಥಿತಿಯಲ್ಲಿ ಅದು
ಸೆಮಿ ಫೈನಲ್‌ಗೇರುವ ಬಗ್ಗೆಯೇ ಅನುಮಾನ ಸೃಷ್ಟಿಯಾಗಿದೆ. ಇದರ ಮಧ್ಯೆ ತಮ್ಮ ಬದ್ಧ ಎದುರಾಳಿ ಆಸ್ಟ್ರೇಲಿಯ ವಿರುದ್ಧವೇ ಸೋತ ನೋವು ಇಂಗ್ಲೆಂಡನ್ನು ಕಾಡುತ್ತಿದೆ. ಈ ಗಾಯಕ್ಕೆ ಆಸ್ಟ್ರೇಲಿಯ ಪೊಲೀಸರು ಉಪ್ಪು ಸವರಿ ಉರಿಯನ್ನು ಇನ್ನಷ್ಟು ಹೆಚ್ಚಿಸಿದ್ದಾರೆ!
ಆಸ್ಟ್ರೇಲಿಯ ಗೆದ್ದ ಬೆನ್ನಲ್ಲೇ ಟ್ವೀಟ್ ಮಾಡಿದ ಬ್ರಿಸ್ಬೇನ್ ಪೊಲೀಸರು, ಇಂಗ್ಲೆಂಡ್ ಕ್ರಿಕೆಟ್ ಅಭಿಮಾನಿಗಳ ಕಣ್ಣೀರಿನಿಂದ ಇಂದು ಬೆಳಗ್ಗೆ ವಾಹನ ಚಾಲನೆ ಮಾಡುವುದು ಕಷ್ಟಕರವಾಗಿ ಪರಿಣಮಿಸಿದೆ.
ಬ್ರಿಸ್ಬೇನಿಗಳೇ ಹುಷಾರಾಗಿ ವಾಹನ ಚಲಾಯಿಸಿ’ ಎಂದು ಅಣಕಿಸಿದ್ದಾರೆ. ಬುಧವಾರ ಬೆಳಗ್ಗೆ ಬ್ರಿಸ್ಬೇನ್‌ನಲ್ಲಿ ಮಳೆ ಬಂದ ಪರಿಣಾಮ ರಸ್ತೆಯಲ್ಲಿ ವಾಹನ ಚಲಾವಣೆ ಕಷ್ಟವಾಗಿತ್ತು. ಕೂಡಲೇ ಈ ಟ್ವೀಟ್ ಅತ್ಯಂತ ಜನಪ್ರಿಯವಾಗಿದೆ. ಸಾವಿರಾರು ಮಂದಿ ಅದನ್ನು ರೀಟ್ವೀಟ್ ಮಾಡಿದ್ದಾರೆ.