Advertisement

ಬೀದರ್ : ಆಸ್ಪತ್ರೆಯಿಂದ 15 ಲಕ್ಷ ಮೌಲ್ಯದ ವೆಂಟಿಲೇಟರ್ ಕದ್ದೊಯ್ದ ಖತರ್ನಾಕ್ ಕಳ್ಳರು

09:29 PM Jun 09, 2021 | Team Udayavani |

ಬೀದರ್ : ನಗರದ ಬ್ರೀಮ್ಸ್ ಆಸ್ಪತ್ರೆಯ ಕೋವಿಡ್ ವಾರ್ಡ್‌ನಲ್ಲಿ ಸುಮಾರು 15 ಲಕ್ಷ ಬೆಲೆ ಬಾಳುವ ಎರಡು ವೆಂಟಿಲೇಟರ್ ಸಿಪಿಓಗಳನ್ನು ಕಿಡಿಗೇಡಿಗಳು ಕಳ್ಳತನ ಮಾಡಿರುವ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.

Advertisement

ಬೀದರ ಜಿಲ್ಲೆಯಲ್ಲಿ ಸದ್ಯ ಕೊರೊನಾ‌ ಸೋಂಕಿತರ ಪ್ರಜರಣಗಳ ಸಂಖ್ಯೆ ಇಳಿಮುಖವಾಗುತ್ತಿದ್ದು, ಬ್ರಿಮ್ಸ್ ಗೆ ದಾಖಲಾಗುವವರ ಸಂಖ್ಯೆಯೂ ಕಡಿಮೆಯಾಗಿದೆ. ಇದನ್ನ ಗಮನಿಸಿದ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ಆಸ್ಪತ್ರೆಯ ಹಿಂಭಾಗದಲ್ಲಿ ಸಿಸಿ ಕ್ಯಾಮರಾ ಇಲ್ಲದಿರುವುದನ್ನು ನೋಡಿ ಕಿಟಕಿಯ ಗಾಜು ಹೊಡೆದು ಒಳಗೆ ಪ್ರವೇಶಿಸಿ, ಎರಡು ವೆಂಟಿಲೇಟರ್ ಸಿಪಿಓಗಳನ್ನು ಕಳ್ಳತನ ಮಾಡಿದ್ದಾರೆ.

ಇದನ್ನೂ ಓದಿ :ಚಿಕ್ಕಬಳ್ಳಾಪುರ: 1126 ಗ್ರಾಮಗಳು ಮತ್ತು 39 ವಾರ್ಡ್‍ಗಳು ಕೊರೊನಾ ಮುಕ್ತ: ಡಿಸಿ

ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಚಂದ್ರಕಾಂತ ಮೇದಾ ಅವರ ದೂರಿನ ಮೇರೆಗೆ ನ್ಯೂ ಟೌನ್ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು‌ ಕಳ್ಳರ ಬಂಧನಕ್ಕೆ ಜಾಲ ಬೀಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಡಿವೈಎಸ್.ಪಿ ಗೋಪಾಲ್ ಬ್ಯಾಕೋಡ ಅವರು ಬ್ರಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next