Advertisement

ಬ್ರಿಮ್ಸ್‌ಗೆ ಧರ್ಮಸಿಂಗ್‌ ನಾಮಕರಣಕೆ ಕ್ರಿರವೇ ಮನವಿ

04:29 PM Aug 09, 2017 | Team Udayavani |

ಬೀದರ: ಸ್ಥಳೀಯ ಬೀದರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬ್ರಿಮ್ಸ್‌)ಗೆ ಮಾಜಿ ಮುಖ್ಯಮಂತ್ರಿ ಡಾ| ಎನ್‌. ಧರ್ಮಸಿಂಗ್‌ ಅವರ ಹೆಸರನ್ನು ನಾಮಕರಣ ಮಾಡಬೇಕು ಎಂದು ಕರ್ನಾಟಕ ಕ್ರಿಶ್ಚಿಯನ್‌ ರಕ್ಷಣಾ ವೇದಿಕೆ ಆಗ್ರಹಿಸಿದೆ. ವೇದಿಕೆಯ ಉತ್ತರ ಕರ್ನಾಟಕ ಘಟಕ ಅಧ್ಯಕ್ಷ ಅಲ್ಬರ್ಟ್‌ ಕೋಟೆ ನೇತೃತ್ವದಲ್ಲಿ ನಗರದ ಪ್ರಮುಖ ರಸ್ತೆಗಳ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ  ರಾ ್ಯಲಿ
ಮೂಲಕ ಆಗಮಿಸಿದ ಕಾರ್ಯಕರ್ತರು, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದರು. ಹೈದ್ರಾಬಾದ ಕರ್ನಾಟಕ ಪ್ರದೇಶದಲ್ಲಿ ವಿಶೇಷವಾಗಿ ಬೀದರ ಜಿಲ್ಲೆ ಅಭಿವೃದ್ಧಿಗೆ ಧರ್ಮಸಿಂಗ್‌ ಅವರ ಕೊಡುಗೆ ಅಪಾರ. ಬ್ರಿಮ್ಸ್‌ ಕಾಲೇಜು, ಬೀದರ- ಹೈದ್ರಾಬಾದ ಇಂಟರ್‌ ಸಿಟಿ ರೈಲು, ಬೀದರ- ಯಶವಂತಪುರ ಎಕ್ಸಪ್ರಸ್‌ ರೈಲು, ಬೀದರ- ಹುಮನಾಬಾದ ಪುಶ್‌-ಫುಲ್‌ ರೈಲು ಆರಮಭ ಹಾಗೂ ಶೈಕ್ಷಣಿಕ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿರುವ ಆಶಾಕಿರಣ ಆಗಿದ್ದಾರೆ. ವೈದ್ಯಕೀಯ ಕಾಲೇಜು ಸ್ಥಾಪಿಸುವ ಮೂಲಕ ಬೀದರ ಹಾಗೂ ಈ ಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣ
ಪಡೆಯಲು ಅವಕಾಶ ಮಾಡಿಕೊಟ್ಟಿದ್ದಾರೆ. ಧರ್ಮಸಿಂಗ್‌ ಅವರ ಹೆಸರು ಚಿರಸ್ಥಾಯಿಯಾಗಿ ಇರುವ ನಿಟ್ಟಿನಲ್ಲಿ ಅವರನ್ನು ಹೆಸರನ್ನು ನಾಮಕರಣ ಮಾಡಬೇಕು. ಮತ್ತು ಅವರ ಪುತ್ಥಳಿಯನ್ನೂ ಸ್ಥಾಪಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಮನವಿ ಪತ್ರಕ್ಕೆ ಜಿಲ್ಲಾ ಗೌರವಾಧ್ಯಕ್ಷ ರಾಜು ಕೊಳಾರ, ಪ್ರಧಾನ ಕಾರ್ಯದರ್ಶಿ ಸಂಜುಕುಮಾರ ಕೌಠಾಕರ್‌, ಪ್ರಮುಖರಾದ ಜಗನ್ನಾಥ ಕೌಠಾ, ಸುಭಾಷ ಅಪ್ಸರಾ, ಜೇಮ್ಸ್‌ ಕೋಳಾರ, ಅಶೋಕ ವಗ್ಗೆ, ಪ್ರಕಾಶ ಭಕಾಳೆ, ಸಾಮಸನ್‌ ಕೋಳಾರ, ಡ್ಯಾನಿಯಲ್‌ ಕೊಡ್ಲಿಕರ್‌,
ಡೇವಿಡ್‌ ಹಲಗೆನೋರ್‌, ಅಮೃತ ಮಾಟರ್‌, ಅನೀಲ ಲೆಮಿನ್‌, ಇಸ್ಮಾಯಿಲ್‌ ಮತ್ತಿತರರು ಸಹಿ ಹಾಕಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next