Advertisement

ಬೃಜೇಶ್‌ ಪಟೇಲ್‌ ಐಪಿಎಲ್‌ ಮುಖ್ಯಸ್ಥ

11:31 PM Oct 23, 2019 | Team Udayavani |

ಮುಂಬಯಿ: ಬಿಸಿಸಿಐನ ನೂತನ ಅಧ್ಯಕ್ಷರಾಗುತ್ತಾರೆಂದೇ ಹೇಳಲಾಗಿದ್ದ ಕರ್ನಾಟಕ ಕ್ರಿಕೆಟ್‌ ಸಂಸ್ಥೆ ಮಾಜಿ ಕಾರ್ಯದರ್ಶಿ ಬೃಜೇಶ್‌ ಪಟೇಲ್‌, ಆ ಸ್ಥಾನವನ್ನು ಕಡೆಯ ಹಂತದಲ್ಲಿ ತಪ್ಪಿಸಿಕೊಂಡಿದ್ದರು. ಆದರೆ ಅವರಿಗೆ ಅಷ್ಟೇ ಮಹತ್ವದ, ಗೌರವ ಯುತವಾದ ಹುದ್ದೆ ದೊರಕಿದೆ. ಅವರಿನ್ನು ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್‌ ಕೂಟವಾದ ಐಪಿಎಲ್‌ನ ಆಡಳಿತ ಮಂಡಳಿ ಮುಖ್ಯಸ್ಥರಾಗಲಿದ್ದಾರೆ. ಇದನ್ನು ಕರ್ನಾಟಕ ಕ್ರಿಕೆಟ್‌ ಸಂಸ್ಥೆ ಪ್ರಕಟಿಸಿದೆ.

Advertisement

66 ವರ್ಷದ ಬೃಜೇಶ್‌ ಪಟೇಲ್‌, 1999ರಿಂದ ಕ್ರಿಕೆಟ್‌ ಆಡಳಿತ ಪ್ರವೇಶಿಸಿದರು. ಅವರು ದೀರ್ಘ‌ಕಾಲ ಕರ್ನಾಟಕ ಕ್ರಿಕೆಟ್‌ ಸಂಸ್ಥೆ ಕಾರ್ಯದರ್ಶಿಯಾಗಿದ್ದರು. 2005ರಲ್ಲಿ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ ಮುಖ್ಯಸ್ಥರಾಗಿ ಗುರುತಿಸಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next