Advertisement
“ನೀವು ತಪ್ಪಿತಸ್ಥರಲ್ಲ ಎಂಬ ವಿಶ್ವಾಸವಿದ್ದರೆ ಮಂಪರು ಪರೀಕ್ಷೆಗೆ ಒಳಗಾಗಿ. ಸುಳ್ಳು ಪತ್ತೆ ಪರೀಕ್ಷೆಯೂ ನಡೆದು ಹೋಗಲಿ. ಈ ಎಲ್ಲ ಪರೀಕ್ಷೆಗಳಿಗೆ ಒಳಪಡಲು ನಾವೂ ಸಿದ್ಧರಿದ್ದೇವೆ. ಸತ್ಯ ಬಹಿರಂಗಗೊಳ್ಳಲಿ’ ಎಂದು ಪತ್ರಿಕಾಗೋಷ್ಠಿಯಲ್ಲಿ ಒಲಿಂಪಿಕ್ಸ್ ಪದಕ ವಿಜೇತೆ ಸಾಕ್ಷಿ ಮಲಿಕ್ ಅವರು ಬ್ರಿಜ್‌ಭೂಷಣ್‌ಗೆ ಸವಾಲು ಹಾಕಿದರು.
“ಎಲ್ಲ ಕುಸ್ತಿ ಸ್ಪರ್ಧೆಗಳು ಭಾರತೀಯ ಒಲಿಂಪಿಕ್ ಅಸೋಸಿಯೇಶನ್ ತಾತ್ಕಾಲಿಕ ಪ್ಯಾನೆಲ್‌ನಲ್ಲಿ ನಡೆಯಬೇಕು. ಇದರಲ್ಲಿ ಡಬ್ಲ್ಯುಎಫ್ಐ ಮುಖ್ಯಸ್ಥರು ಪಾಲ್ಗೊಳ್ಳುವುದನ್ನು ನಾವು ವಿರೋಧಿಸುತ್ತೇವೆ’ ಎಂಬುದು ಬಜರಂಗ್ ಪುನಿಯ ಅವರ ಸವಾಲು. ಕುಸ್ತಿಪಟುಗಳ ಪ್ರತಿಭಟನೆ 15 ದಿನ ಕಂಡಿದ್ದು, ಗುರುವಾರ ಎಲ್ಲರೂ ಕಪ್ಪುಪಟ್ಟಿ ಧರಿಸಲು ನಿರ್ಧರಿಸಿದ್ದಾರೆ.