ಮುಂಬಯಿ: ಹೊರನಾಡು ಮುಂಬಯಿಯಲ್ಲಿ ಕನ್ನಡಿಗರ ಸಂಖ್ಯೆ ಹೆಚ್ಚಿದ್ದು, ಮುಂಬಯಿ ಗರ ಪ್ರಾತಿನಿಧ್ಯ ಗುರುತರವಾದದ್ದು. ಚರ್ಚೆ, ಸಂವಾದಗಳಿಂದ ಸಾಧ್ಯವಾಗುವುದು. ಮುಂಬ ಯಿಯಲ್ಲಿ ಕನ್ನಡದ ಕೆಲಸ ಅದ್ಭುತವಾಗಿ ನಡೆಯುತ್ತಿದೆ. ಮುಂಬಯಿ ನೆಲೆವಾಸಿ ಕನ್ನಡಿಗರ ಗೌರವದಿಂದಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರಾಡಳಿತಕ್ಕೆ ನೇರ ಆಡಳಿತಕ್ಕೆ ಒಳಪಟ್ಟಂತೆ ಹೆಚ್ಚಿನ ಸ್ಥಾನಮಾನಕೊಟ್ಟು ಅನುಮೋದನೆಗೊಳಿಸಿ ಬೃಹನ್ಮುಂಬಯಿ ಕನ್ನಡ ಸಾಹಿತ್ಯ ಪರಿಷತ್ ಘಟಕ ಸೇವಾರ್ಪಣೆ ಮಾಡಲಿದ್ದೇವೆ ಆ ಮೂಲಕ ನಾವು ಕನ್ನಡಕ್ಕಾಗಿ ಇನ್ನಷ್ಟು ಒಟ್ಟಾಗಿ ಶ್ರಮಿಸೋಣ ಎಂದು ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ಇದರ ಅಧ್ಯಕ್ಷ ಡಾ| ಮನು ಬಳಿಗಾರ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಫೆ. 8ರಂದು ಸಂಜೆ ಮಾಟುಂಗಾ ಪೂರ್ವ ಮೈಸೂರು ಅಸೋಸಿಯೇಶನ್‌ನ ಕಿರು ಸಭಾಗೃಹದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಇವರು, ಈ ಬಾರಿ ಮುಂಬಯಿ ಮಹಾನಗರದಲ್ಲಿ ಫೆ. 10 ಮತ್ತು ಫೆ. 11ರಂದು ದ್ವಿದಿನಗಳಲ್ಲಿ ಅಂಧೇರಿ ಪಶ್ಚಿಮದ ಮಹಾಲಕ್ಷ್ಮೀ ಕಾಲನಿಯ ಮೊಗವೀರ ಭವನದಲ್ಲಿ ಹಮ್ಮಿಕೊಡಿರುವ ಹೊರ
ನಾಡ ಕನ್ನಡಿಗರ ದ್ವಿತೀಯ ರಾಷ್ಟ್ರೀಯ ಸಮಾವೇಶದ ಬಗ್ಗೆ ಡಾ| ಮನು ಬಳಿಗಾರ್ ವಿವರಿಸಿದರು. ಕಸಾಪ ಬೆಂಗಳೂರು ಇದರ ಸಾರಥ್ಯ ಹಾಗೂ ಬೃಹನ್ಮುಂಬಯಿ ಮತ್ತು ಉಪನಗರಗಳ ಸುಮಾರು ಮೂವತ್ತು ಸಂಘ ಸಂಸ್ಥೆಗಳ ಕೂಡುವಿಕೆಯಲ್ಲಿ ಏರ್ಪಡಿಸಲಾಗಿರುವ ರಾಷ್ಟ್ರೀಯ ಸಮಾವೇಶವನ್ನು ಫೆ. 10ರಂದು ಶನಿವಾರ ಪೂರ್ವಾಹ್ನ 10ರಿಂದ ಗಂಟೆಗೆ ನಾಡಿನ ಪ್ರಸಿದ್ಧ ಕಾದಂಬರಿಕಾರ ಡಾ| ಎಸ್. ಎಲ್. ಭೈರಪ್ಪ ಮುಂಬಯಿ ಕನ್ನಡಿಗರ ಸಾಧನ ಮಂಟಪ ಉದ್ಘಾಟಿಸಿ ಸಮಾವೇಶಕ್ಕೆ ಚಾಲನೆ ನೀಡಲಿದ್ದಾರೆ. ಅತಿಥಿಯಾಗಿ ಅಂಕಣಕಾರ ಎಸ್. ಷಡಕ್ಷರಿ ಆಗಮಿಸಲಿದ್ದು ಅಖೀಲ ಭಾರತ ಬಿಲ್ಲವ ಮಹಾಮಂಡಲದ ಅಧ್ಯಕ್ಷ ಜಯ ಸಿ. ಸುವರ್ಣ ನೆನಹೊತ್ತಿಗೆ ಬಿಡುಗಡೆಗೊಳಿಸಲಿದ್ದಾರೆ. ಸಮ್ಮೇಳನದಲ್ಲಿ ನಾಲ್ಕು ವಿಚಾರಗೋಷ್ಠಿಗಳು, ಕವಿಗೋಷ್ಠಿ ನಡೆಯಲಿದೆ. ಎರಡೂ ದಿನಗಳಲ್ಲೂ ವಿವಿಧ ಸಂಸ್ಥೆಗಳ ಕಲಾವಿದರು ನೃತ್ಯ, ಜನಪದ ಗಾಯನಗಳೊಂದಿಗೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ, ಶ್ರೀ ಗುರು ನಾರಾಯಣ ಯಕ್ಷಗಾನ ಮಂಡಳಿ ಯಕ್ಷಗಾನ ಪ್ರದರ್ಶಿಸಲಿದ್ದಾರೆ. ಫೆ. 11 ರಂದು ಸಂಜೆ 5ರಿಂದ ಸಮಾರೋಪ ಸಮಾರಂಭ ನಡೆಯಲಿದ್ದು, ಮುಖ್ಯ ಅತಿಥಿಯಾಗಿ ಹಿರಿಯ ಸಾಹಿತಿ ಹಾಗೂ ಚಿಂತಕ ಪ್ರೊ| ಚಂದ್ರಶೇಖರ ಪಾಟೀಲ, ಅತಿಥಿ ಅಭ್ಯಾಗತರುಗಳಾಗಿ ಕನ್ನಡ ವಿಶ್ವವಿದ್ಯಾಲಯ ಹಂಪಿ ಇದರ ಕುಲಪತಿ ಡಾ| ಮಲ್ಲಿಕಾ ಘಂಟಿ, ಸಂಸ್ಕೃತಿ ಚಿಂತಕ ಡಾ| ಎಂ. ಮೋಹನ್ ಆಳ್ವ ಮೂಡಬಿದ್ರೆ ಆಗಮಿಸಲಿದ್ದು, ಮಹಾನಗರದಲ್ಲಿನ ನಾಲ್ವರು ಕನ್ನಡಿಗ ಸಾಧಕರನ್ನು ಸಮ್ಮಾನಿಸಲಾಗುವುದು. ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಮ್ಮೇಳನ ಅಂತ್ಯವಾಗಲಿದೆ. ಆ ಪ್ರಯುಕ್ತ ಮುಂಬಯಿವಾಸಿ ಕನ್ನಡಿಗರು ಅತ್ಯಾಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಪತ್ರಿಕಾ ಹೇಳಿಕೆಯಲ್ಲಿ ಬಳಿಗಾರ್ ವಿನಂತಿಸಿದರು. ಬರುವ ಆಗಸ್ಟ್‌ನಲ್ಲಿ ಬೃಹನ್ಮುಂಬಯಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗುವುದು. ಅದಕ್ಕಾಗಿ ಐದು ಲಕ್ಷ ರೂ. ಸಾಂಕೇತಿಕವಾಗಿ ಬಿಡುಗಡೆ ಮಾಡು ವುದಾಗಿ ಬಳಿಗಾರ್ ತಿಳಿಸಿದರು. ಇದು ಸಾಲದು ಆದರೆ ಮುಂಬಯಿ ಕನ್ನಡಿಗರಿಗೆ ದುಡಿªನ ಸಮಸ್ಯೆ ಇಲ್ಲ. ಆದರೆ ಈ ಸಮ್ಮೇಳನ ಮುಂಬಯಿಗರ ಮನ್ನಣೆ, ಗೌರವ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಬೃಹನ್ಮುಂಬಯಿ ಕನ್ನಡ ಸಾಹಿತ್ಯ ಪರಿಷತ್ತು ಘಟಕ ಉದ್ಘಾಟನೆಯೇ ಒಂದು ದೊಡª ಸಂಭ್ರಮವಾಗಿದೆ ಎಂದು ಬಳಿಗಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮೈಸೂರು ಅಸೋಸಿ ಯೇಶನ್ ಮುಂಬಯಿ ಇದರ ಪ್ರಧಾನ ಕಾರ್ಯದರ್ಶಿ ಡಾ| ಗಣಪತಿ ಶಂಕರಲಿಂಗ, ಡಾ| ಬಿ. ಆರ್. ಮಂಜುನಾಥ್, ಕೆ. ಮಂಜು ನಾಥಯ್ಯ ಉಪಸ್ಥಿತರಿದ್ದು ಸಮಾವೇಶದ ಸಿದ್ಧತೆ ಬಗ್ಗೆ ಮಾಹಿತಿ ನೀಡಿದರು. ವಿವಿಧ ಸಂಘ ಟನೆಗಳ ಪದಾಧಿಕಾರಿಗಳು, ಪತ್ರಕರ್ತರು, ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಚಿತ್ರ-ವರದಿ: ರೋನ್ಸ್ ಬಂಟ್ವಾಳ್